ಜಿಲ್ಲೆ

ಜೂ. 9ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಜೂ.9ರಂದು ಚಾಮರಾಜನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 66/11ಕೆವಿ ದೊಡ್ಡರಾಯಪೇಟೆ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಫೀಡರ್‌ಗಳಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂ.9 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಚಾಮರಾಜನಗರ ಪಟ್ಟಣ ಸೇರಿದಂತೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಸೋಮವಾರಪೇಟೆ, ಮೂಡ್ಲುಪುರ, ಗಾಳಿಪುರ, ಅಂಬೇಡ್ಕರ್ ಬಡಾವಣೆ, ಸತ್ತಿ ರಸ್ತೆ, ಯಡಪುರ (ಜಿಲ್ಲಾಸ್ಪತ್ರೆ), ಮಲ್ಲಯ್ಯನಪುರ, ವರದರಾಜಪುರ, ಕೆ.ಎಚ್.ಬಿ ಕಾಲೋನಿ, ರೈಲ್ವೆ ಬಡಾವಣೆ, ಉಪ್ಪಾರ ಬೀದಿ, ನಂಜನಗೂಡು ರಸ್ತೆ, ಪೊಲೀಸ್ ಕ್ವಾರ್ಟರ್ಸ್‌, ಚಾಮರಾಜನಗರ ಪಟ್ಟಣ, ಜಿಲ್ಲಾಧಿಕಾರಿ ಕಚೇರಿ, ಭ್ರಮರಾಂಭ ಬಡಾವಣೆ, ರಾಮಸಮುದ್ರ, ಹೌಸಿಂಗ್ ಬೋರ್ಡ್, ಕರಿನಂಜನಪುರ, ಶಂಕರಪುರ, ಬಿ. ರಾಚಯ್ಯ ಜೋಡಿರಸ್ತೆ, ಕೋರ್ಟ್ ರಸ್ತೆ ಮತ್ತು ಮಾದಾಪುರ, ಕಾಡಹಳ್ಳಿ, ಮಸಗಾಪುರ, ಕಿರಗಸೂರು, ಹಂಡ್ರಕಳ್ಳಿ ಮೋಳೆ, ಮಂಗಲ, ಮಂಗಲ ಹೊಸೂರು, ಕಣ್ಣೇಗಾಲ, ಸಿಂಗನಪುರ, ಭೋಗಾಪುರ ಹಾಗೂ ಇತರೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಚಾಮರಾಜನಗರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.