Oplus_0 
ಜಿಲ್ಲೆ

ಕುಡ್ಕೊಂಡು ಕೆಲಸಕ್ಕೆ ಬರ್ತಿದ್ದ ನೌಕರಿಗೆ ನೋಟೋಸ್ ಜಾರಿ…

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಮದ್ಯಪಾನ ಮಾಡಿ ಕೆಲಸಕ್ಕೆ ಬರುತ್ತಿದ್ದ ಸರ್ಕಾರಿ ನೌಕರನಿಗೆ ಲಿಖಿತ ಸಮಜಾಯಿಷಿ ನೀಡಲು ನೋಟೀಸ್ ಜಾರಿ ಮಾಡಲಾಗಿದೆ.

ಯಳಂದೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಸಂತೋಷ್‌ಕುಮಾರ್ ನೋಟೀಸ್ ಪಡೆದಿರುವ ನೌಕರ. ಈತ ಕಚೇರಿಗೆ ಕುಡಿದು ಬರುತ್ತಿದ್ದನೆಂದು ಸಹಾಯಕ ನಿರ್ದೇಶಕ ರಾಜೇಶ್ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಅವರಿಗೆ ದೂರು ನೀಡಿದ್ದಾರೆ.

ಇದಕ್ಕೆ ಉಪನಿರ್ದೇಶಕರು ನೊಟೀಸ್ ಜಾರಿ ಮಾಡಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯನ್ನು ಉಲ್ಲಂಘನೆ ಮಾಡಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ನಿಮ್ಮ ಮೇಲೆ ಶಿಸ್ತು ಕ್ರಮ ಜಗುಗಿಸಲು ಇಲಾಖೆಯ ಆಯುಕ್ತರಿಗೆ ಶಿಫಾರಸ್ಸು ಮಾಡಲಾಗುವುದು ಕೂಡಲೇ ನೀವು ಬಂದು ಲಿಖಿತವಾಗಿ ಈ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ಎಚ್ಚರಿಕೆ ನೋಟೀಸ್ ಜಾರಿ ಮಾಡಿದ್ದಾರೆ.