ಜಿಲ್ಲೆ

18ರಂದು ಪುಟ್ಟಸ್ವಾಮಿ ಅಭಿಮಾನಿಗಳ ಸಭೆ

reportermys

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ.ಎಸ್.ಪುಟ್ಟಸ್ವಾಮಿ ಅಭಿಮಾನಿಗಳ ಸಭೆಯನ್ನು ಮಾ.18ರಂದು ಕರೆಯಲಾಗಿದೆ ಎಂದು ಕಾಡಳ್ಳಿ ಮಾಜಿ ಚೇರ್ಮನ್ ಮಹದೇವಪ್ಪ ಹೇಳಿದರು.


ಅಂದು ನಗರದ ಸತ್ತಿ ರಸ್ತೆಯಲ್ಲಿರುವ ಶಿವಕುಮಾರಸ್ವಾಮಿ ಭವನದಲ್ಲಿ ಬೆಳಗ್ಗೆ 10.30ಕ್ಕೆ ಸಭೆ ಆರಂಭಗೊಳ್ಳಲಿದೆ. ಸಭೆಗೆ ದಿ.ಎಸ್.ಪುಟ್ಟಸ್ವಾಮಿ ಕುಟುಂಬ ರಾಜಕಾರಣದಲ್ಲಿ ಮುಂದುವರಿಯಬೇಕು. ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲು ಸಭೆ ಕರೆಯಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಎಸ್.ಪುಟ್ಟಸ್ವಾಮಿ ಅವರ ಪ್ರೇರಣೆಯಿಂದ ಆಗಿನ ಕಾಲದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಯಾಯಿತು. ಆದರೆ, ಅವರ ಕುಟುಂಬದವರು ರಾಜಕೀಯದಿಂದ ದೂರ ಇರುವುದನ್ನು ಮನಗಂಡ ಎಸ್.ಪುಟ್ಟಸ್ವಾಮಿ ಅಭಿಮಾನಿಗಳ ಸಭೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ರಾಜಶೇಖರ್, ಮುಖಂಡರಾದ ರಾಜೇಂದ್ರಪ್ರಸಾದ್, ವೀರೇಶ್, ಶ್ರೀನಿವಾಸ್‌ಪ್ರಸಾದ್, ಅಂಕಶೆಟ್ಟಿ ಇದ್ದರು.