ಜಿಲ್ಲೆ

ಉಳಿದ ಅಭ್ಯರ್ಥಿಗಳಿಗೆ ಸಿಕ್ಕ ಮತವೆಷ್ಟು?

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಣಾಹಣಿ ಏರ್ಪಟ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಬಿಟ್ಟರೆ ಉಳಿದ ಅಭ್ಯರ್ಥಿಗಳು ಪಡೆದ ಮತಗಳು 20 ಸಾವಿರ ದಾಟಿಲ್ಲ

ಕ್ಷೇತ್ರದಲ್ಲಿ ನಿರೀಕ್ಷೆಯನ್ನು ಮೂಡಿಸಿದ್ದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಎಂ.ಕೃಷ್ಣಮೂರ್ತಿ-15903 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ ಪಕ್ಷದಿಂದ ಸ್ಪರ್ಧಿಸಿದ್ದ ಸಿ.ಎಂ.ಕೃಷ್ಣ-8089 ಮತಗಳನ್ನು ಪಡೆದುಕೊಂಡರು. ಕರ್ನಾಟಕ ಜನತಾ ಪಕ್ಷದ ಎಸ್.ನಿಂಗರಾಜು-1411, ಕರ್ನಾಟಕ ಪ್ರಜಾ ಪಕ್ಷದ ಬಿ.ಪ್ರಸನ್ನಕುಮಾರ್-978, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಂದಹಳ್ಳಿ ಮಹೇಶ್-1252 ಮತಗಳನ್ನು ಪಡೆದರು.

ಕಣದಲ್ಲಿ ಮಹಿಳಾ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಕಮ್ಯೂನಿಸ್ಟ್ ಪಕ್ಷದ ಎಸ್.ಸುಮ 3826 ಮತಗಳನ್ನು ಗಳಿಸಿದರು. ಕಣದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಫರ್ಧೆ ಮಾಡಿದ್ದ ಕದಂಬ ನಾ.ಅಂಬರೀಷ್-1743, ಜೆ.ನಿಂಗರಾಜು-1247, ಎಂ.ಪ್ರದೀಪ್‌ಕುಮಾರ್-1986, ಬಿ.ಎಂ.ಮಹದೇವಸ್ವಾಮಿ-3421, ಜೆ.ಡಿ.ರಾಜಗೋಪಾಲ್-3954, ಎಚ್.ಕೆ.ಸ್ವಾಮಿ ಹರದನಹಳ್ಳಿ-3208 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ನೋಟಾಗೆ 8143 ಮತಗಳು ಚಲಾವಣೆಯಾಗಿದ್ದವು.