ಚಾಮರಾಜನಗರ: ಗೆದ್ದಿರುವ ಸುನೀಲ್‌ಬೋಸ್ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಜೋರಾಗಿಯೇ ಅಪಪ್ರಚಾರ ನಡೆಯಿತು.
ನಾಮಪತ್ರ ಸಲ್ಲಿಕೆ ದಿನ ಗೋ ಬ್ಯಾಕ್ ಸುನೀಲ್‌ಬೋಸ್, ಮರಳು ಮಾಫಿಯಾದ ದೊರೆ ಎಂಬ ಪೋಸ್ಟರ್‌ಗಳನ್ನು ನಗರದ ರಸ್ತೆಯಲ್ಲಿ ಅಂಟಿಸಲಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಪತ್ನಿ ಮತ್ತು ಮಗಳ ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಬಿಜೆಪಿ ದೂರು ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುನೀಲ್‌ಬೋಸ್ ವಿರುದ್ಧ ಅವಹೇಳನಾಕಾರಿ ಹೇಳಿಕೆಗಳ ವಿರುದ್ಧವೂ ಪಕ್ಷದ ಕಾರ್ಯಕರ್ತರು ದೂರು ನೀಡಿದ್ದರು. ಇವೆಲ್ಲದಕ್ಕೂ ಲಿತಾಂಶ ಪ್ರತ್ಯುತ್ತರ ನೀಡಿದಂತಿದೆ.