ಜಿಲ್ಲೆ

13, 14 ರಂದು ನ್ಯಾಕ್ ಪೀರ್ ಸಮಿತಿ ಭೇಟಿ

ಚಾಮರಾಜನಗರ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಜು.13, 14 ರಂದು ನ್ಯಾಕ್ ಪೀರ್ ಸಮಿತಿ ಭೇಟಿ ನೀಡಲಿದ್ದು, ಕಾಲೇಜಿಗೆ ಉತ್ತಮ ಗ್ರೇಡ್ ಬರುವ ನಿರೀಕ್ಷೆ ಇದೆ ಎಂದು ಪ್ರಾಂಶುಪಾಲೆ ಎಂ.ಆರ್.ಸುಮತಿ ಹೇಳಿದರು.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಜು.13 ರ ಬೆಳಗ್ಗೆ ನ್ಯಾಕ್ ಪೀರ್ ಸಮಿತಿ ಭೇಟಿ ನೀಡಲಿದ್ದು, ಮಧ್ಯಾಹ್ನ ಸಮಿತಿ ಜತೆ ಸಭೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 14 ರಂದು ನ್ಯಾಕ್ ಸಮಿತಿ ಎಕ್ಸಿಟ್ ಮೀಟಿಂಗ್ ನಡೆಯಲಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಕೈಗೊಂಡಿರುವ ಕ್ರಮಗಳ ಮಾನದಂಡದ ಆಧಾರದಲ್ಲಿ ಅಂಕ ನೀಡುವ ಜತೆಗೆ, ನ್ಯಾಕ್ ಸಮಿತಿ ಕಾಲೇಜಿಗೆ ಉತ್ತಮ ಗ್ರೇಡ್ ನೀಡಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು 2013 ರಲ್ಲಿ ಪ್ರಾರಂಭವಾಯಿತು. ಬಿಎ, ಬಿಎಸ್ಸಿ, ಬಿಕಾಂ ಕೋರ್ಸ್‌ಗಳಿಂದ ಒಟ್ಟು 508 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಪ್ರಾರಂಭವಾದಾಗ 110 ವಿದ್ಯಾರ್ಥಿಗಳಿದ್ದು, ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೇ ವರ್ಷದಿಂದ, ವರ್ಷಕ್ಕೆ ಉತ್ತಮ ಲಿತಾಂಶ ಬರುತ್ತಿದ್ದು, ಕಾಲೇಜಿನಲ್ಲಿ ಎನ್‌ಎಸ್‌ಎಸ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ಸ್ಕೌಟ್ ಆ್ಯಂಡ್ ಗೈಡ್ಸ್ ಮೂಲಕ ವಿದ್ಯಾರ್ಥಿಗಳಿಗೆ ಪತ್ಯೇತರ ಚಟುವಟಿಕೆಗಳಿಗೆ ಉತ್ತಮ ವೇದಿಕೆ ಒದಗಿಸಿಕೊಡಲಾಗುತ್ತಿದೆ. ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳಿಗೂ ಆದ್ಯತೆ ನೀಡಲಾಗಿದ್ದು, ವರ್ಷದಲ್ಲಿ 4-5 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾಲೇಜಿನಲ್ಲಿ ಮೂಲ ಸೌಕರ್ಯ ಕೊರತೆ ಇದ್ದರೂ, ಒಳ್ಳೆಯ ಫಲಿತಾಂಶ ಬರಲು ಕಾರಣವಾಗಿದೆ ಎಂದರು. ಉಪನ್ಯಾಸಕ ಪುಷ್ಪಕುಮಾರ್, ಗುರುರಾಜ್ ಯರಗನಹಳ್ಳಿ, ಸಿದ್ದರಾಜು, ರುಕ್ಮಿಣಿ, ಪ್ರೊ.ಜಯಣ್ಣ, ಡಾ.ಮಂಜುನಾಥ್ ಹಾಜರಿದ್ದರು.