ಜಿಲ್ಲೆ

ಟೆಂಪೋ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ವಡಕೆಹಳ್ಳ ಗ್ರಾಮದ ಬಳಿ ಭಾನುವಾರ ಬೈಕ್ ಹಾಗೂ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.

ತಾಲೂಕಿನ ಕೋಣನಕೆರೆ ಗ್ರಾಮದ ಗಿರೀಶ್ (19) ಮೃತ. ಮತ್ತೊಬ್ಬ ಸವಾರ ಮಹದೇವಸ್ವಾಮಿ (18) ಗಾಯಗೊಂಡವರು. ಮಧ್ಯಾಹ್ನ ಸುಮಾರು 2ರ ವೇಳೆಯಲ್ಲಿ ಗಿರೀಶ್ ಸ್ನೇಹಿತ ಮಹದೇವಸ್ವಾಮಿ ಜತೆ ಬೈಕ್‌ನಲ್ಲಿ ಕೌದಳ್ಳಿಗೆ ತೆರಳಿದ್ದು, ಗ್ರಾಮಕ್ಕೆ ವಾಪಸ್ಸಾಗುತ್ತಿದ್ದನು. ಈ ವೇಳೆ ವಡಕೆ ಹಳ್ಳದ ಬಳಿ ಕೋಳಿಗಳನ್ನು ಸಾಗಿಸುತ್ತಿದ್ದ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡರು.

ಈ ವೇಳೆ ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು. ಆದರೆ ಮಹೇಶ್ ಮಾರ್ಗಮಧ್ಯೆ ಮೃತಪಟ್ಟರೆ, ಮಹದೇವಸ್ವಾಮಿ ಅವರಿಗೆ ವೈದ್ಯರು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾ.ನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.