ಚಾಮರಾಜನಗರ: ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಜಿಲ್ಲಾದ್ಯಂತ ಆಯೋಜಿಸಿದ್ದ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಬುಧವಾರ ಮುಕ್ತಾಯಗೊಂಡಿತು. ೊನೆಯ ದಿನವೂ ಉತ್ತಮ ಸ್ಪಂದನೆ ದೊರೆಯಿತು.
ನಗರದ ಹೌಸಿಂಗ್ ಬೋರ್ಡ್ ರಸ್ತೆ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದ ಎದುರು ಇರುವ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಮೇ 25ರಿಂದ ಆರಂಭಗೊಂಡಿದ್ದ ಉಚಿತ ಹೇರ್ ಕಲರಿಂಗ್ ಅಭಿಯಾನ ಮುಗಿಯಿತು. ಇದಕ್ಕೂ ಮೊದಲು ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ತಾಲೂಕು ಕೇಂದ್ರಗಳಲ್ಲಿ ತಲಾ ಮೂರು ದಿನ ಅಭಿಯಾನ ನಡೆದಿತ್ತು. ಈ ಸಂದರ್ಭದಲ್ಲಿ ಪ್ರತಿದಿನವೂ ನೂರಾರು ಮಹಿಳೆಯರು, ಪುರುಷರು ಅಭಿಯಾನದಲ್ಲಿ ಭಾಗಹಿಸಿದ್ದರು.
ತಮ್ಮ ನೆಚ್ಚಿನ ಬಣ್ಣಗಳನ್ನು ಸಾರ್ವಜನಿಕರು ತಲೆಗೂದಲಿಗೆ ಹಾಕಿಸಿಕೊಂಡರು. ಅಲ್ಲದೆ ಉಚಿತ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಾರ್ನಿಯರ್ ಕಂಪನಿಯ ಕಲರಿಂಗ್ ಅನ್ನು ಇಷ್ಟ ಪಟ್ಟು, ಮುಂದಿನ ದಿನಗಳಲ್ಲಿ ಇದನ್ನೇ ಉಪಯೋಗಿಸುವುದಾಗಿಯೂ ತಿಳಿಸಿದರು.