ಹನೂರು: ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಬಿಜೆಪಿ ಮುಖಂಡ ನಿಶಾಂತ್ ಅವರ ಸಹಯೋಗದಲ್ಲಿ 3 ದಿನಗಳ ಕಾಲ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಪ್ರೀಮಿಯರ್ ಲೀಗ್ ಸೀಸನ್- 3 ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ಬಂಡಳ್ಳಿ ಐಸಿಸಿ ತಂಡ ಜಯಗಳಿಸಿತು.
ಈ ಪಂದ್ಯದಲ್ಲಿ ಮಹದೇಶ್ವರಬೆಟ್ಟದ ಎಂಸಿಸಿ, ಹನೂರಿನ ಬಿಆರ್‌ಎ ಕ್ರಿಕೆಟರ್ಸ್, ಲೊಕ್ಕನಹಳ್ಳಿಯ ಕಿಂಗ್ ಮೇಕರ್ಸ್, ಪಳನಿಮೇಡಿನ ಜೈ ಭೀಮ್ ಕ್ರಿಕೆಟರ್ಸ್, ಈಗಲ್ ವಾರಿಯರ್ಸ್, ಕೌದಳ್ಳಿಯ ಟ್ರೋಫಿ ಫೈಟರ್ಸ್, ಕಿರೇಪಾತಿಯ ಗೋಟ್ಸ್ ಹಾಗೂ ಬಂಡಳ್ಳಿಯ ಐಸಿಸಿ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾವಳಿಯಲ್ಲಿ ಕಿರೇಪಾತಿಯ ಗೋಟ್ಸ್ ಹಾಗೂ ಬಂಡಳ್ಳಿಯ ಐಸಿಸಿ ತಂಡ ಸೆಣಸಾಟ ನಡೆಸಿದವು. 8 ಓವರ್‌ಗೆ ಕಿರೇಪಾತಿಯ ಗೋಟ್ಸ್ ತಂಡ 3 ವಿಕೆಟ್ ನಷ್ಟಕ್ಕೆ 65 ರನ್ ಪಡೆದರೆ, ಬಂಡಳ್ಳಿಯ ಐಸಿಸಿ ತಂಡ 67 ರನ್ ಗಳಿಸುವುದರ ಮೂಲಕ ವಿಜಯ ಸಾಧಿಸಿತು. ಪ್ರಥಮ ಬಹುಮಾನ 60 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 30 ಸಾವಿರ ರೂ. ನೀಡಲಾಯಿತು. ಆಯೋಜಕರಾಗಿ ಮೇಘರಾಜ್, ಸಾಗರ್ ಕಾರ್ಯನಿರ್ವಹಿಸಿದರು.