ಜಿಲ್ಲೆ

ಉಚಿತ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಸಹಯೋಗದಲ್ಲಿ ಮೇ 25 ರಿಂದ 5 ದಿನಗಳ ಕಾಲ ಚಾಮರಾಜನಗರದಲ್ಲಿ ಆಯೋಜಿಸಿರುವ ಗಾರ್ನಿಯರ್ ‘ಉಚಿತ ಹೇರ್ ಕಲರಿಂಗ್ ಅಭಿಯಾನ’ಕ್ಕೆ ಶನಿವಾರ ಚಾಲನೆ ದೊರೆತಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ನಗರದ ಹೌಸಿಂಗ್ ಬೋರ್ಡ್ ಕಾಲನಿಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನ ಸಮೀಪದಲ್ಲಿರುವ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಮಹಿಳೆಯರು, ಪುರುಷರು, ಯುವಕರು ಮತ್ತು ಯುವತಿಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮಿಷ್ಟದ ಬಣ್ಣಗಳನ್ನು ಕೂದಲಿಗೆ ಹಾಕಿಸಿಕೊಂಡು ಖುಷಿಪಟ್ಟರು.

ನಗರಸಭಾ ಸದಸ್ಯರಾದ ಕುಮುದಾ ಕೇಶವಮೂರ್ತಿ, ಮಮತಾ ಬಾಲಸುಬ್ರಮ್ಮಣ್ಯಂ, ಜೆಡಿಎಸ್ ಮುಖಂಡ ಆಲೂರು ಮಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಹೋರಾಟಗಾರ ವಾಸು ಹೊಂಡರಬಾಳು, ದೊಡ್ಡರಾಯಪೇಟೆ ಕೃಷ್ಣಮೂರ್ತಿ, ಶಿವಶಂಕರ್ ಚಟ್ಟು ಹಾಜರಿದ್ದರು.

ಹೆಸರಾಂತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ಈ ಅಭಿಯಾನಕ್ಕಾಗಿ ವಿಶೇಷ ಮಾದರಿಯ ಸಲೂನ್ ವ್ಯವಸ್ಥೆಗೊಳಿಸಿದೆ. ಪರಿಣಿತರು ವಿವಿಧ ವಿನ್ಯಾಸದ ಹೇರ್ ಕಲರಿಂಗ್ ಮಾಡಿದ್ದು ಅಭಿಯಾನದಲ್ಲಿ ಪಾಲ್ಗೊಂಡಿದ್ದವರನ್ನು ಆಕರ್ಷಿಸಿತು. ಹೇರ್ ಕಲರಿಂಗ್ ಮಾಡಿದ ಸ್ಥಳದಲ್ಲಿಯೇ ಹೇರ್ ಕ್ಲೀನಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಈ ಉಚಿತ ಅಭಿಯಾನ ಮೇ 29ರವರೆಗೆ ಇರಲಿದ್ದು, ಆಸಕ್ತ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉಚಿತವಾಗಿ ಪ್ರಯೋಜನ ಪಡೆದುಕೊಳ್ಳಬಹುದು.