ಜಿಲ್ಲೆ

ರೈತರಿಗೆ ತರಬೇತಿ ಕಾರ್ಯಾಗಾರ

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಅರಿಶಿಣ, ಬಾಳೆ, ತೆಂಗು ಮತ್ತು ರೇಷ್ಮೆ ಬೆಳೆಯ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ಸೋಮವಾರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಎ.ಬಿ.ಮೋಹನ್ ಕುಮಾರ್, ರೇಷ್ಮೆಕೃಷಿ ವಿಜ್ಞಾನಿ ಡಾ.ಎಸ್.ಚಂದ್ರಶೇಖರ್ ಕಳ್ಳೀಮನಿ, ವಿಜ್ಞಾನಿ ಡಾ.ಜೆ.ದೀಪಾ ಹಾಗೂ ರೈತರು ಹಾಜರಿದ್ದರು.