ಜಿಲ್ಲೆ

ಶಿವರಾತ್ರಿ ಪ್ರೌಢಶಾಲೆಗೆ ಶೇ.86.84 ಲಿತಾಂಶ

ಚಾಮರಾಜನಗರ: ತಾಲೂಕಿನ ಕೆರೆಹಳ್ಳಿಹುಂಡಿ ಜಗದ್ಗುರು ಶ್ರೀ ಶಿವರಾತ್ರಿ ಪ್ರೌಢಶಾಲೆ 2023-24ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.86.84 ರಷ್ಟು ಲಿತಾಂಶ ಪಡೆದುಕೊಂಡಿದೆ.

ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳಲ್ಲಿ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಆರ್.ಮಾನ್ಯಶ್ರೀ 535 ಅಂಕಗಳೊಂದಿಗೆ ಉನ್ನತಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ವಿದ್ಯಾರ್ಥಿಗಳಾದ ಸಿಂಚನಾ 497, ಆರತಿ 454 ಅಂಕಗಳನ್ನು ಪಡೆದಿರುತ್ತಾರೆ. ಉನ್ನತ ಶ್ರೇಣಿ 1 ಪ್ರಥಮ ದರ್ಜೆ 15, ದ್ವಿತೀಯ ದರ್ಜೆ 6, ತೃತೀಯ ದರ್ಜೆಯಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈಮೂಲಕ ಶಾಲೆಗೆ ಉತ್ತಮ ಲಿತಾಂಶವನ್ನು ತಂದು ಕೊಟ್ಟಿರುತ್ತಾರೆ ಎಂದು ಮುಖ್ಯಶಿಕ್ಷಕ ಎಂ.ಶಿವಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.