ಜಿಲ್ಲೆ

ಪ್ರೀತಮ್ ಎಂ.ಯರಗನಹಳ್ಳಿಗೆ ಅಧಿಕ ಅಂಕ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ನಗರದ ಸೇವಾ ಭಾರತಿ ಪಬ್ಲಿಕ್ ಶಾಲೆಯ(ಸಿಬಿಎಸ್‌ಇ) ವಿದ್ಯಾರ್ಥಿ ಪ್ರೀತಮ್ ಎಂ.ಯರಗನಹಳ್ಳಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ್ದಾನೆ.

ನಗರದ ಪೂರ್ವ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಾದೇಶ್ ಮತ್ತು ಮಮತಾ ಅವರ ಪುತ್ರ ಪ್ರೀತಮ್ ಗಣಿತ ವಿಷಯದಲ್ಲಿ 91(100), ವಿಜ್ಞಾನದಲ್ಲಿ 95(100) ಅಂಕ ಗಳಿಸಿರುವ ಶಾಲೆಯ ಮೊದಲಿಗ. ಉಳಿದ ವಿಷಯಗಳಾದ ಕನ್ನಡ-97, ಇಂಗ್ಲಿಷ್-86, ಸಮಾಜ ವಿಜ್ಞಾನ-95 ಅಂಕ ಪಡೆದಿದ್ದಾನೆ. ಒಟ್ಟು 500 ಅಂಕಗಳಿಗೆ 464 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾನೆ.