ಚಾಮರಾಜನಗರ: ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದು ಇತ್ತೀಚೆಗೆ ಸುರಿದ ಬಿರುಗಾಳಿ ಮಳೆಯಿಂದಾಗಿ ಸುಮಾರು 1,500 ಗಿಡಗಳು ನೆಲಕ್ಕುರುಳಿವೆ ಎಂದು ಗುಂಡ್ಲುಪೇಟೆ ತಾಲೂಕಿನ ಪಂಜನಹಳ್ಳಿಯ ಮಂಜುನಾಥ್ ಹೇಳಿದ್ದಾರೆ.
ಬಿರುಗಾಳಿ ಮಳೆಗೆ ಬೆಳೆ ನಷ್ಟದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಅವರು, ಈವರೆಗೆ ಸಸಿ ನಾಟಿ ಮಾಡಲು, ಗೊಬ್ಬರ, ನಿರ್ವಹಣೆ ಸೇರಿ ಪ್ರತಿ ಗಿಡಕ್ಕೆ ಸಾವಿರಾರು ರೂ. ವೆಚ್ಚವಾಗಿದೆ. ಎಂಟು ತಿಂಗಳ ಸಸಿ ನೆಲಕಚ್ಚಿದ್ದರಿಂದ ಸುಮಾರು ಎರಡೂವರೆ ಲಕ್ಷ ರೂ. ಬೆಲೆಬಾಳುವ ಬೆಳೆ ನಾಶವಾಗಿದೆ. ತೋಟಗಾರಿಕೆ ಇಲಾಖೆ ಪ್ರಸ್ತುತ ವೆಚ್ಚದ ಬಗ್ಗೆ ಮಾಹಿತಿ ಸಂಗ್ರಹಿಸಿ, ರೈತರಿಗೆ ವಾಸ್ತವಿಕ ನಷ್ಟದ ವರದಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.