ಜಿಲ್ಲೆ

ಹೆಬ್ಬಸೂರಿನಲ್ಲಿ ಹೆಬ್ಬಾವು ರಕ್ಷಣೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ತಾಲೂಕಿನ ಹೆಬ್ಬಸೂರಿನ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನು ಮಂಗಳವಾರ ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.

ಗ್ರಾಮದ ಶಶಿಕುಮಾರ್ ಅವರ ಜಮೀನಿನಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ಉರಗ ರಕ್ಷಕ ಅಶೋಕ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು. ಅಶೋಕ್ ಸ್ಥಳಕ್ಕೆ ತೆರಳಿ ಹೆಬ್ಬಾವು ರಕ್ಷಣೆ ಮಾಡಿದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ಹೆಬ್ಬಾವನ್ನು ಕಾಡಿಗೆ ಬಿಡಲಾಯಿತು.