ಚಾಮರಾಜನಗರ:ವಿದ್ಯಾರ್ಥಿಗಳು ಕ್ರೀಡೆಯ ಜತೆಗೆ, ಪಠ್ಯದಲ್ಲೂ ಆಸಕ್ತಿವಹಿಸಿ ಉತ್ತಮ ಬದುಕಿ ರೂಪಿಸಿಕೊಳ್ಳಿ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಶಮಿತ್ ಕುಮಾರ್ ಸಲಹೆ ನೀಡಿದರು.
ತಾಲೂಕಿನ ವೆಂಕಟಯ್ಯನಛತ್ರ ್ರೆಂಡ್ಸ್ ಕ್ಲಬ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಖೋ ಖೋ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ದೇಶಿಯ ಆಟಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೊರದೇಶದ ಆಟವಾದ ಕ್ರಿಕೆಟ್‌ಗೆ ಸಿಗುವ ಸ್ಥಾನಮಾನ ದೇಶಿಯ ಕ್ರೀಡೆಗಳಿಗೂ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಬ್ಬಡ್ಡಿ ಪ್ರೊ ನಂತೆಯೇ, ಖೋಖೋ ಕ್ರೀಡೆಯೂ ಪ್ರಾರಂಭವಾಗಿದೆ. ಹಳ್ಳಿಗಾಡಿನ ಮಕ್ಕಳು ಉತ್ತಮ ತರಬೇತಿಯನ್ನು ಪಡೆದು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಮಾಡಿ ಗ್ರಾಮಕ್ಕೆ ಹೆಚ್ಚಿನ ಕೀರ್ತಿ ಸಂಪಾದಿಸಿ ಎಂದರು.
್ರೆಂಡ್ಸ್ ಕ್ಲಬ್‌ನಲ್ಲಿ ಇರುವ ಕ್ರೀಡಾಪಟುಗಳು ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳೆ, ಅದಾಗ್ಯೂ ಧೃತಿಗೆಡದೆ ತಾವು ಕಲಿಯುವುದರ ಜತೆಗೆ ಈ ಶಾಲೆಯ ಮಕ್ಕಳಿಗೂ ಕ್ರೀಡಾ ಸ್ಪೂರ್ತಿ ತುಂಬುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಈ ಶಾಲೆಯ ಕೆಲವು ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಮೂಲಕ ಕ್ರೀಡೆಯ ಜತೆಗೆ ಉನ್ನತ ವ್ಯಾಸಂಗದ ಕಡೆ ವಿದ್ಯಾರ್ಥಿಗಳು ಗಮನಹರಿಸಿ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಪ್ರೌಢಶಾಲೆಯ ಉಪಪ್ರಾಂಶುಪಾಲೆ ನಾಗರತ್ನ ಮಾತನಾಡಿ, ಬಹಳ ಶ್ರದ್ಧೆಯಿಂದ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಜಾತಿ, ಅಂತಸ್ತು ಎಂಬ ಭೇದ ತೋರದೆ, ಶಾಲೆಯ ದೈಹಿಕ ಶಿಕ್ಷಕ ನಟರಾಜ್ ಈ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಅದಕ್ಕೆ ಸಹಕಾರ ನೀಡುತ್ತಿದ್ದಾರೆ. ಈ ಶಾಲೆಯ ಮಕ್ಕಳ ಪಾಲಕರು ನೀಡುವ ಪ್ರೋತ್ಸಾಹ ಅತ್ಯಂತ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘದ ಕಾರ್ಯದರ್ಶಿ ಕಿರಣ್‌ರಾಜ್, ಮಲ್ಲೇಶ್, ವೆಂಕಟಛಲ, ಸುಜಾತ, ಲೋಕೇಶ್, ದೈಹಿಕ ಶಿಕ್ಷಕ ನಟರಾಜ್, ಮುಖಂಡ ಮಹದೇವನಾಯ್ಕ, ್ರೆಂಡ್ಸ್ ಕ್ಲಬ್ ಸದಸ್ಯರಾದ ಪ್ರಸಾದ್, ಮಹದೇವಸ್ವಾಮಿ, ಚಂದು, ಪ್ರಭು, ಮಣಿರಾಜ್, ಮಹೇಶ್, ನವೀನ್, ಭುವನೇಶ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಖೋಖೋ ದಿನಾಚರಣೆಯನ್ನು ಆಯೋಜಿಸಿದ್ದು. ಗ್ರಾಮದ ್ರೆಂಡ್ಸ್ ಕ್ಲಬ್ ಸದಸ್ಯರು, ಶಾಲೆಯ ಆವರಣದಲ್ಲಿರುವ ಖೋಖೋ ಅಂಕಣವನ್ನು ರಂಗೋಲಿ ಬಿಡಿಸಿ, ಹೂವಿನಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಖೋಖೋ ಮೈದಾನಕ್ಕೆ ಎಲ್ಲರೂ ಒಟ್ಟುಗೂಡಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ನೆರೆದಿದ್ದ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.