ಕೊಳ್ಳೇಗಾಲ:ಪಟ್ಟಣದ ಶ್ರೀ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜು 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶ ಸಾಧಿಸಿದೆ.
ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 276 ವಿದ್ಯಾರ್ಥಿಗಳ ಪೈಕಿ 267 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 85 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 160 ಪ್ರಥಮ ದರ್ಜೆ, 19 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.95 ಫಲಿತಾಂಶ ಬಂದಿದ್ದು, 57 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 85 ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಎಸ್.ಭಾವನಾ 600ಕ್ಕೆ 585, ಹರಿಣ ಪ್ರಿಯಾ 584, ಆರ್.ಸೌಮ್ಯಾ 583, ಎಲ್. ಸ್ಪಂದನಾ 579, ಪಿ.ನಯನ 575 ಅಂಕ ಗಳಿಸಿ ಉತೀರ್ಣರಾಗಿದ್ದಾರೆ.
ವಾಣಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ದೊರೆತಿದ್ದು, 28 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 75 ಪ್ರಥಮ ದರ್ಜೆ, 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಜೆ.ಎಸ್.ಅನನ್ಯ 600ಕ್ಕೆ 584, ಎಸ್.ರವಿಕುಮಾರ್ 584, ಆರ್. ನಿಖಿಲ್‌ಗೌಡ 582, ಎನ್.ಸರಸ್ವತಿ 580, ಪಿ.ಚೈತ್ರಾ ಶ್ರೀ 571, ಕೆ.ಜೆ.ರಚನಾ 568, ಆರ್. ಲಿಖಿತಾ 564, ಎನ್.ಶ್ರೀಕಂಠ 561 ಅಂಕ ಗಳಿಸಿದ್ದಾರೆ.
ಪೋಟೋಗಳಿವೆ: ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳಿಸಿದ ಎಸ್. ಭಾವನ (600 ಕ್ಕೆ 585), ಹರಿಣ ಪ್ರಿಯಾ (600 ಕ್ಕೆ 584), ಸೌಮ್ಯ ಆರ್ (600 ಕ್ಕೆ 583), ವಾಣಿಜ್ಯ ವಿಭಾಗದಲ್ಲಿ ಜೆ.ಎಸ್ ಅನನ್ಯ (600ಕ್ಕೆ 584) ಎಸ್. ರವಿಕುಮಾರ್ (600 ಕ್ಕೆ 584) ಆರ್.ನಿಖಿಲ್ ಗೌಡ (600 ಕ್ಕೆ 582) ಫೋಟೋ ಇದೆ.