ಜಿಲ್ಲೆ

ಮುರುಘರಾಜೇಂದ್ರ ಸ್ವಾಮಿ ಕಾಲೇಜಿಗೆ ಶೇ.99 ಲಿತಾಂಶ

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ಮರಿಯಾಲ ಗ್ರಾಮದ ಶ್ರೀ ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.99ರಷ್ಟು ಲಿತಾಂಶ ಬಂದಿದೆ.

ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗ ಶೇ.100, ವಿಜ್ಞಾನ ವಿಭಾಗದಲ್ಲಿ ಶೇ.97ರಷ್ಟು ಲಿತಾಂಶ ದೊರೆತಿದೆ. ಪರೀಕ್ಷೆಗೆ ಹಾಜರಾಗಿದ್ದ 74 ವಿದ್ಯಾರ್ಥಿಗಳ ಪೈಕಿ 73 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ಫೂರ್ತಿ 600ಕ್ಕೆ 556 ಅಂಕಗಳು, ವಾಣಿಜ್ಯ ವಿಭಾಗದಲ್ಲಿ ವಿ.ನಾಗಮಲ್ಲು 545 ಅಂಕಗಳು, ವಿನೋದ್ ಕುಮಾರ್ 525 ಅಂಕಗಳು, ಎಂ.ಸಂಜನಯ್ 511 ಅಂಕಗಳು, ವಿಜ್ಞಾನ ವಿಭಾಗದಲ್ಲಿ ಎಂ.ಎಸ್.ಪ್ರೀತಿ 528 ಅಂಕಗಳು, ನಿಖಿತಾ 522, ಕಲಾ ವಿಭಾಗದಲ್ಲಿ ಸಂಜನಾ 525, ಡಿ.ಮಾನಸ 502, ಮಮತಾ 496, ಅಂಕಗಳನ್ನು ಪಡೆದಿದ್ದಾರೆ.

ಒಟ್ಟಾರೆ ಅತ್ಯುನ್ನತ ದರ್ಜೆಯಲ್ಲಿ 08, ಪ್ರಥಮ ದರ್ಜೆಯಲ್ಲಿ 58, ದ್ವಿತೀಯ ದರ್ಜೆಯಲ್ಲಿ 4 ಮತ್ತು ತೃತೀಯ ದರ್ಜೆಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಆಡಳಿತ ಮಂಡಳಿ, ಆಡಳಿತಾಧಿಕಾರಿ ಮತ್ತು ಪ್ರಾಂಶುಪಾಲರು, ಉಪನ್ಯಾಸಕರು ಅಭಿನಂದಿಸಿದ್ದಾರೆ.