ಜಿಲ್ಲೆ

ಅರಣ್ಯದಲ್ಲಿ ಸೋಲಿಗನ ಶವ ಪತ್ತೆ

ಚಾಮರಾಜನಗರ: ಸುವರ್ಣಾವತಿ ಹಿನ್ನೀರಿನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸೋಲಿಗರೊಬ್ಬರ ಶವ ಪತ್ತೆಯಾಗಿದೆ.

ತಾಲೂಕಿನ ಕುಳ್ಳೂರು ಗ್ರಾಮದ ಜಡಿಯ ಉರ್ು ಜಡಿಯಾಗೌಡ (60) ಎಂದು ಗುರುತಿಸಲಾಗಿದೆ. ಬಿಆರ್‌ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಸುವರ್ಣಾವತಿ ಅರಣ್ಯ ಪ್ರದೇಶದ ರಾಮಪುರ ಗಸ್ತು ಅರಣ್ಯ ಗಡಿಯಿಂದ ಸುಮಾರು 1 ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ವನ್ಯಜೀವಿ ದಾಳಿಯಿಂದ ಈತ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.