ಜಿಲ್ಲೆ

ಕೆಸ್ತೂರು ಜಾತ್ರೆ ಶಾಂತಿ ಸಭೆ

ಎ.ಎಸ್.ಮಣಿಕಂಠ

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಏ.2 ರಿಂದ 4 ರವರೆಗೆ ನಡೆಯಲಿರುವ ಜಾತ್ರೆಗೆ ಪೂರ್ವಭಾವಿಯಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಶನಿವಾರ ಶಾಂತಿ ಸಭೆ ನಡೆಯಿತು.

ಗ್ರಾಮದಲ್ಲಿ 13 ಕೋಮಿನ ಜನರಿದ್ದಾರೆ. ಎಲ್ಲರೂ ಸೇರಿ ಆಚರಿಸುವ ದೊಡ್ಡ ಹಬ್ಬ ಇದಾಗಿದೆ. ಇದನ್ನು ಆಚರಿಸುವ ವೇಳೆ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಶಾಂತಿಯಿಂದ ಎಲ್ಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಬೇಕು. ಜತೆಗೆ ಗ್ರಾಮದಲ್ಲಿ ಎಲ್ಲರೂ ಅನ್ಯೋನ್ಯವಾಗಿದ್ದು ಇದಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಬೇಕಾಗುವ ಎಲ್ಲ ಕಾನೂನು ನೆರವನ್ನೂ ಇಲಾಖೆಯಿಂದ ನೀಡಲಾಗುವುದು ಎಂದು ಶ್ರೀಕಾಂತ್ ಹೇಳಿದರು.

ಪಿಎಸ್‌ಐ ಮಹಾದೇವ್ ಸೇರಿದಂತೆ ಗ್ರಾಮದ ವಿವಿಧ ಕೋಮಿನ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.