ಜಿಲ್ಲೆ

ಬೆಂಕಿ ಬಿದ್ದು ಜೋಳದ ಕಡ್ಡಿ ಮೆದೆ ಭಸ್ಮ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಜಮೀನಿನಲ್ಲಿದ್ದ ಜೋಳದ ಕಡ್ಡಿಯ ಮೆದೆಗೆ ಬೆಂಕಿ ತಗುಲಿ ಭಸ್ಮವಾಗಿದೆ.

ಗ್ರಾಮದ ಪತ್ರಕರ್ತ ಎಚ್.ಮಹೇಶ್ ಅವರ ಜಮೀನಿನನಲ್ಲಿ ಶೇಖರಿಸಿದ್ದ ಜೋಳದ ಕಡ್ಡಿ ಮೆದೆಗೆ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು, ಮೆದೆ ಸಂಪೂರ್ಣ ಭಸ್ಮವಾಗಿದೆ. ಜಮೀನಿನಲ್ಲಿ ಅಳವಡಿಸಲು ಇಟ್ಟಿದ್ದ ಹನಿ ನೀರಾವರಿ ಪೈಪ್‌ಗಳೂ ಸುಟ್ಟು ಕರಕಲಾಗಿವೆ.