ಚಾಮರಾಜನಗರ: ಬದಲಾದ ಜೀವನ ಶೈಲಿಯಿಂದಾಗಿ ಅಸಾಂಕ್ರಾಮಿಕ ರೋಗಗಳು ಜನರನ್ನು ಕಾಡುತ್ತಿವೆ ಎಂದು ಜಿಲ್ಲಾಕಾರಿ ಡಿ.ಎಸ್.ರಮೇಶ್ ತಿಳಿಸಿದರು.
ನಗರದ ವರನಟ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇನ್ಸ್‌ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಸೀಮೆನ್ಸ್ ಹೆಲ್ತಿನಿಯರ್ಸ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಇಂಪ್ಯಾಕ್ಟ್ ಎನ್‌ಸಿಡಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಮೊದಲು ಅಸಾಂಕ್ರಾಮಿಕ ರೋಗಗಳಿಗೆ ಹೆಚ್ಚಿನ ಒತ್ತು ನೀಡುತ್ತಿರಲಿಲ್ಲ. ಆದರೆ ಬದಲಾದ ಜೀವನ ಶೈಲಿಯಿಂದಾಗಿ, ಪ್ರತಿಯೊಬ್ಬರ ಜೀವನದಲ್ಲಿ ಒತ್ತಡ ಹೆಚ್ಚಾಗಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಈ ಹಿಂದೆಯೂ ರೋಗಗಳು ಜನರನ್ನು ಕಾಡುತ್ತಿತ್ತು. ಆದರೆ ದೇವರ ಮೇಲೆ ಭಾರ ಹಾಕಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಇಂದು ಎಲ್ಲರ ಜೀವನದಲ್ಲಿ ಒತ್ತಡ ಹೆಚ್ಚಾಗಿ ಹಲವಾರು ರೋಗಿಗಳಿಗೆ ತುತ್ತಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದುಳಿದ ಜಿಲ್ಲೆಯಾದ ಚಾ.ನಗರದಲ್ಲಿ ಮುಂದುವರಿದ ಜಿಲ್ಲೆಗೆ ಸರಿಸಮನಾಗಿ ಅಸಾಂಕ್ರಾಮಿಕ ರೋಗಗಳು ಕಂಡುಬರುತ್ತಿದೆ. ಈ ಯೋಜನೆಯ ಮೂಲಕ ಸಂಶೋಧನೆ ನಡೆಸಿ ಜನರು ಒತ್ತಡದಿಂದ ಹೇಗೆ ಹೊರ ಬರಬೇಕು ಹಾಗೂ ಆಹಾರ ಬದಲಾವಣೆ ಹೇಗೆ ಎಂದು ತಿಳಿದುಕೊಂಡರೆ ಕಾಯಿಲೆ ಮೇಲೆ ಪರಿಣಾಮ ಬೀರುವ ಅಂಶವನ್ನು ತಿಳಿದುಕೊಳ್ಳಲು ಸಾಧ್ಯವೆ ಎಂಬ ನಿಟ್ಟಿನಲ್ಲಿ 3 ವರ್ಷಗಳ ಕಾಲ ಸಂಶೋಧನೆ ಕೈಗೊಂಡಿದ್ದಾರೆ. ಬುಡಕಟ್ಟು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ, ಜಿಲ್ಲೆಯನ್ನು ಈ ಯೋಜನೆಗೆ ಆಯ್ಕೆ ಮಾಡಿರುವುದು ಉತ್ತಮವಾದ ಕೆಲಸವಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯಿಂದ ಜನಸಾಮಾನ್ಯರ ಬಳಿ ತಲುಪುತ್ತಿದ್ದೇವೆ. ಈ ಯೋಜನೆಯಲ್ಲಿ ಎಲ್ಲರ ಭಾಗವಹಿಸುವಿಕೆ ಬಹುಮುಖ್ಯ. ಆರೋಗ್ಯ ಇಲಾಖೆಯು ಇಂಪ್ಯಾಕ್ಟ್ ಎನ್‌ಸಿಡಿ ಯೋಜನೆ ಜತೆಗೆ ಹೆಜ್ಜೆ ಹಾಕಿ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ಮಂಜುಳಾ, ಜಿಲ್ಲಾ ಸರ್ವೇಕ್ಷಣಾ ಅಕಾರಿ ಎಂ.ನಾಗರಾಜು, ಜಿಲ್ಲಾ ಕ್ಷಯರೋಗ ನಿರ್ಮೂಲನಾಕಾರಿ ಡಾ.ರವಿಕುಮಾರ್, ಇನ್ಸ್‌ಟಿಟ್ಯೂಟ್ ಆ್ ಪಬ್ಲಿಕ್ ಹೆಲ್ತ್ ಸಹ ನಿರ್ದೇಶಕ ಡಾ.ಪ್ರಶಾಂತ್, ಸಿಎಸ್‌ಆರ್ ಎ.ಶ್ವೇತಾಂಜಲಿ, ತಾಲೂಕು ಆರೋಗ್ಯಾಕಾರಿಗಳಾದ ಡಾ.ಗೋಪಾಲ್, ಡಾ.ಶ್ರೀನಿವಾಸ್, ಸರ್ಕಾರಿ ನರ್ಸಿಂಗ್ ಶಾಲೆ ಪ್ರಾಂಶುಪಾಲ ಮೊಹಮ್ಮದ್, ಡಾ.ಕಾಂತರಾಜ್, ಯೋಜನೆಯ ಮುಖ್ಯಸ್ಥ ಡಾ.ಯೋಗೀಶ್ ಇತರರು ಉಪಸ್ಥಿತರಿದ್ದರು.