ಜಿಲ್ಲೆ

ವಿವಾಹಿತೆಯೊಂದಿಗೆ ಕಿರಿಯ ಮಗ ಪರಾರಿ: ಅವಮಾನ ಸಹಿಸದೆ ತಾಯಿ, ಸಹೋದರ ನೇಣಿಗೆ ಶರಣು

ಚಾಮರಾಜನಗರ: ವಿವಾಹಿತ ಮಹಿಳೆಯೊಂದಿಗೆ ಕಿರಿಯ ಮಗ ಪರಾರಿಯಾದ ಹಿನ್ನೆಲೆಯಲ್ಲಿ ಅವಮಾನ ತಾಳಲಾರದೆ ತಾಯಿ ಮತ್ತು ಸಹೋದರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ನಡೆದಿದೆ.

ಸುಬ್ಬಮ್ಮ (40) ಹಾಗೂ ಸಿದ್ದರಾಜು (26) ಮೃತ ದುರ್ದೈವಿಗಳು. ಕುಟುಂಬದ ಕಿರಿಯ ಮಗ ಹಾಗೂ ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದ ನಂಜುಂಡಿ ತನ್ನದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ. ಈ ಸುದ್ದಿ ಕೇಳಿ ಗ್ರಾಮದಲ್ಲಿ ತಲೆ ಎತ್ತಿಕೊಂಡು ಬಾಳಲು ಸಾಧ್ಯವೆ ಎಂದು ಹೆದರಿ ಮನೆಯಲ್ಲಿಯೇ ಇಬ್ಬರು ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.

ಘಟನಾ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)