ಚಾಮರಾಜನಗರ: ತಾಳುಬೆಟ್ಟದ ಬಳಿ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ನೌಕರರೊಬ್ಬರು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮಹದೇವಪ್ರಸಾದ್ (28) ಎಂಬವರೇ ಮೃತ ವ್ಯಕ್ತಿ. ಈತ ಮ.ಬೆಟ್ಟದಲ್ಲಿ ಪಂಪ್ ಹೌಸ್ನಲ್ಲಿ ಅಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪತ್ನಿಯ ಊರಾದ ನಂಜನಗೂಡಿನ ತೆಳ್ಳೂರಿಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅನುಮಾಸ್ಪದವಾಗಿ ಮೃತಪಟ್ಟಿದ್ದಾರೆ. ಮ.ಬೆಟ್ಟದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.