ಹನೂರು: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಭಾನುವಾರ ಅಬಕಾರಿ ಇಲಾಖೆಯ ಪೊಲೀಸರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಪಟ್ಟಣದ ನಂಜುಂಡಸ್ವಾಮಿ (35) ಬಂಧಿತ ಆರೋಪಿ. ಈತ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಮದ್ಯವನ್ನು ಚೀಲದಲ್ಲಿ ತುಂಬಿಕೊಂಡು ತೆರಳುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇನ್ಸ್‌ಪೆಕ್ಟರ್ ಡಿ.ಸುನೀಲ್ ಹಾಗೂ ಸಿಬ್ಬಂದಿ ಬಸ್ ನಿಲ್ದಾಣದ ಬಳಿ ಬೈಕ್ ತಡೆದು ಪರಿಶೀಲಿಸಿದಾಗ ಮದ್ಯ ಇರುವುದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಆತನಿಂದ ಬೈಕ್ ಹಾಗೂ 6,660 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಯಿತು. ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಸಿದ್ದಯ್ಯ, ಪೇದೆಗಳಾದ ಕೆ.ಪ್ರದೀಪ್‌ಕುಮಾರ್, ಎನ್. ಸುಜನ್‌ರಾಜ್, ಸಿ. ಮಂಜುಪ್ರಸಾದ್ ಭಾಗವಹಿಸಿದ್ದರು.