ಜಿಲ್ಲೆ

ನೃತ್ಯ ಸ್ಪರ್ಧೆಯಲ್ಲಿ ಎನ್.ಆಕಾಂಕ್ಷಾಗೆ ಬಹುಮಾನ

reportermys

ಯಳಂದೂರು: ತಾಲೂಕಿನ ಮೆಳ್ಳಹಳ್ಳಿಯ ಆದರ್ಶ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿನಿ ಎನ್.ಆಕಾಂಕ್ಷಾ ಶಾಸೀಯ ನೃತ್ಯದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾಳೆ.

ಪಟ್ಟಣದ ಬಳೇಪೇಟೆ ನಿವಾಸಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಾಗರಾಜು ಮತ್ತು ಲತಾ ದಂಪತಿಯ ಪುತ್ರಿ ಎನ್.ಆಕಾಂಕ್ಷಾ ನ್ಯಾಷನಲ್ ಎಜುಕೇಷನ್ ಆ್ಯಂಡ್ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್ ಆರ್ಗನೈಜೇಷನ್ ಇತ್ತೀಚಿಗೆ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ‘ಎ’ ಗ್ರೇಡ್‌ನೊಂದಿಗೆ ಪದಕ, ಪಾರಿತೋಷಕ ಮತ್ತು ಪ್ರಮಾಣಪತ್ರ ಪಡೆದು ಕೀರ್ತಿ ತಂದಿದ್ದಾರೆ. ಆಕಾಂಕ್ಷಾ ಕೊಳ್ಳೇಗಾಲದಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಳು. ಕೋವಿಡ್ ಬಳಿಕ ತರಬೇತಿ ನಿಲ್ಲಿಸಿದ್ದಳು. ಶಾಸೀಯ ನೃತ್ಯ ಗೊತ್ತಿರುವ ತಾಯಿ ಲತಾ ಆಕಾಂಕ್ಷಾಗೆ ನೃತ್ಯ ಹೇಳಿಕೊಡುತ್ತಿದ್ದಾರೆ.