ಗುಂಡ್ಲುಪೇಟೆ: ಪಟ್ಟಣದ ಪೊಲೀಸರು ಕಾರ್ಯಾಚರಣೆ ನಡೆಸಿ, ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರನ್ನು ರಕ್ಷಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಮದ್ದೂರು ಚೆಕ್‌ಪೋಸ್ಟ್ ಬಳಿ ದಾಳಿ ನಡೆಸಿ ಪಿಕಪ್ ವಾಹನದಲ್ಲಿದ್ದ ಹಸುವನ್ನು ರಕ್ಷಿಸಿ, ಕೇರಳ ಮೂಲದ ಹರಿ ಕುಮಾರ್ ಹಾಗೂ ಬಾಲು ಎಂಬುವರನ್ನು ಬಂಧಿಸಿದ್ದಾರೆ. ರಕ್ಷಿಸಿದ ಜಾನುವಾರನ್ನು ಕನಕಗಿರಿಯ ಪಿಂಜರಾಪೋಲ್‌ಗೆ ಕಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮುದ್ದುರಾಜ್, ಸಿಬ್ಬಂದಿ ಶಶಿಧರ್‌ಮೂರ್ತಿ, ಕುಮಾರ್, ಕೃಷ್ಣ ಭಾಗವಹಿಸಿದ್ದರು.