ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ-ಮಂಗಲ ರಸ್ತೆಯಲ್ಲಿ ಹುಲಿ ರಸ್ತೆ ದಾಟುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ಬಂಡೀಪುರದಿಂದ ಮಂಗಲಕ್ಕೆ ಹೋಗುವ ರಸ್ತೆ ಬದಿಯಲ್ಲಿದ್ದ ಪೊದೆಯೊಳಗಿನಿಂದ ಭಾರಿ ಗಾತ್ರದ ಹುಲಿ ರಸ್ತೆ ದಾಟಿ ಮತ್ತೊಂದು ಕಡೆಗೆ ತೆರಳಿದೆ. ಬಂಡೀಪುರದ ರಸ್ತೆ ಬದಿಯಲ್ಲಿ ಆಗಾಗ್ಗೆ ಆನೆ, ಜಿಂಕೆ, ನವಿಲು, ಕಾಡೆಮ್ಮೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದರೂ ಸೋಮವಾರ ಬೆಳಗ್ಗೆ ಹುಲಿ ಕಾಣಿಸಿಕೊಂಡಿದೆ. ಈ ಮಾರ್ಗವಾಗಿ ತೆರಳುತ್ತಿದ್ದ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ವೈರಲ್ ಆಗಿದೆ.