ಕೊಳ್ಳೇಗಾಲ: ತಾಲೂಕಿನ ಹೊಸ ಹಂಪಾಪುರ ಗ್ರಾಮದ ಬಳಿ ಕೊಳ್ಳೇಗಾಲ ಆರ್ಯ ವೈಶ್ಯ ಸಂಘದಿಂದ ನಿರ್ಮಾಣ ಮಾಡುತ್ತಿರುವ ನೂತನ ಶಾಲಾ ಕಟ್ಟಡ ಕಾಮಗಾರಿಗೆ ಬೆಂಗಳೂರಿನ ಶ್ರೀ ವಾಸವಿ ವಿಶ್ವಪೀಠ ಆರ್ಯವೈಶ್ಯ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಶ್ರೀ ವಾಸವಿ ವಿದ್ಯಾ ಸಂಸ್ಥೆಗಳಿದೆ. ಇವುಗಳಲ್ಲಿ ಕೊಳ್ಳೇಗಾಲದಲ್ಲಿರುವ ಶ್ರೀ ವಾಸವಿ ವಿದ್ಯಾ ಸಂಸ್ಥೆಯು ಈ ಭಾಗದ ಜನರಿಗೆ ಸಂಸ್ಕಾರ ಜತೆ, ಗುಣಮಟ್ಟ ಶಿಕ್ಷಣ ನೀಡುತ್ತ ಪ್ರಗತಿ ಸಾಧಿಸಿದೆ. ಭಾರತ ದೇಶಕ್ಕೆ ಹೆಚ್ಚು ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ. ದೇವಾಲಯಗಳು ಸಾಕಷ್ಟಿದೆ. ಇನ್ಮುಂದೆ ವಿದ್ಯಾಲಯಗಳು ಹೆಚ್ಚಾಗಬೇಕಿದೆ ಎಂದರು. ಈ ನಿಟ್ಟಿನಲ್ಲಿ ಕೊಳ್ಳೇಗಾಲ ಶ್ರೀ ವಾಸವಿ ವಿದ್ಯಾ ಸಂಸ್ಥೆ ಮೂರುವರೆ ಎಕರೆ ಜಾಗದಲ್ಲಿ ನೂತನವಾಗಿ ಇಂಟರ್ ನ್ಯಾಷನಲ್ ಶಾಲೆ ನಿರ್ಮಿಸಲು ಮುಂದಾಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರಾದ ಅರ್.ನರೇಂದ್ರ, ಎಸ್.ಬಾಲರಾಜು, ಕರ್ನಾಟಕ ಆರ್ಯವೈಶ್ಯ ಸಂಘ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್, ಬೆಂಗಳೂರು ಶ್ರೀ ಭಾಗ್ಯಲಕ್ಷ್ಮೀ ಗ್ರೂಫ್ ಆಫ್ ಇಂಡಸ್ಟ್ರೀಸ್ ಬಿ.ಎ.ಶ್ರೀನಿವಾಸ ಗುಪ್ತ, ಬೆಂಗಳೂರಿನ ಕ್ಲಾಲ್ಡ್ ನೈನ್ ಹಾಸ್ಪಿಟಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಬಿ.ಆರ್.ಕಿಶೋರ್, ಬೆಂಗಳೂರಿನ ಶ್ರೀಗ್ಲೋಕೊ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀನಾಥ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ, ಕಾರ್ಯದರ್ಶಿ ಪಿ.ಜಿ.ಶ್ರೀಧರ್, ಐ.ಎನ್.ಜಿ ವೈಶ್ಯ ಬ್ಯಾಂಕ್ ನಿವೃತ್ತ ವಿಭಾಗೀಯ ವ್ಯವಸ್ಥಾಪಕ ನರಸಿಂಹಮೂರ್ತಿ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಇದ್ದರು.