ಹನೂರು: ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಶೂಟೌಟ್‌ನಿಂದ ಮೃತಪಟ್ಟ ಮೂವರಿಗೆ ಭಾನುವಾರ ತಾಲೂಕಿನ ಮರಿಯಮಂಗಲ ಕಾಣಿಕೆ ಮಾತೆ ಚರ್ಚ್‌ನಲ್ಲಿ 40ನೇ ದಿನದ ಪುಣ್ಯಸ್ಮರಣೆ ಆಯೋಜಿಸಲಾಗಿತ್ತು.
ಮೃತಪಟ್ಟ ಲಾಸರ್ ದೊಡ್ಡಿಯ ಡೇವಿಡ್ ಕುಮಾರ್, ಜಗನ್ನಾಥ ದೊಡ್ಡಿಯ ಪೀಟರ್ ಹಾಗೂ ಮರಿಯಮಂಗಲ ಗ್ರಾಮದ ಅಂಥೋಣಿಸ್ವಾಮಿ ಅವರ ಭಾವಚಿತ್ರಕ್ಕೆ ಮೈಸೂರು ಧರ್ಮಗುರು ಪ್ರಕಾಶ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದಿವ್ಯ ಬಲಿಪೂಜೆ ನೆರವೇರಿಸಲಾಯಿತು. ಈ ವೇಳೆ ಮೃತರ ಪತ್ನಿಯರು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ಶಾಸಕ ಎಂ.ಆರ್ ಮಂಜುನಾಥ್ ಅವರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ನಾವು ನಿಮ್ಮೊಂದಿಗಿದ್ದೇವೆ. ಧೈರ್ಯದಿಂದ ಇರಿ ಎಂದು ಸಾಂತ್ವನ ಹೇಳಿದರು.
ತೊಮಿಯಾರ್ ಪಾಳ್ಯ ಚರ್ಚ್ ಫಾದರ್ ಜೋಸೆಫ್, ಮುಖಂಡರಾದ ಜಾನ್‌ಪೌಲ್, ರಾಜಣ್ಣ, ಸೈಯದ್ ರಫೀಕ್, ನಟರಾಜು, ಪೊನ್ನಾಚಿ ರಾಜು ಇತರರಿದ್ದರು.