ಯಳಂದೂರು: ತಾಲೂಕಿನ ಎಲ್ಲೆಡೆ ದೀಪಾವಳಿ ಹಬ್ಬವನ್ನು ಎರಡನೇ ದಿನವಾದ ಸೋಮವಾರ ಲಕ್ಷ್ಮೀಪೂಜೆ ಮಾಡುವ ಮೂಲಕ ಆಚರಿಸಲಾಯಿತು.
ತಾಲೂಕಿನ ಕಂದಹಳ್ಳಿ ಶ್ರೀ ಮಹದೇಶ್ವರ ದೇಗುಲದಲ್ಲಿ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಪಟ್ಟಣ ಹೊರ ವಲಯದಲ್ಲಿರುವ ಪ್ರವಾಸಿ ಮಂದಿರದ ಮುಂಭಾಗ ತೆರೆದಿರುವ 7 ಪಟಾಕಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯಿತು.