ಗಾಯಗೊಂಡಿದ್ದ ಸೆಸ್ಕ್ ಪವರ್‌ಮನ್ ಸಾಗರ್ ಅವರನ್ನು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿತ್ತು.  
ಚಾಮರಾಜನಗರ

ಮರದಿಂದ ಬಿದ್ದು ಸೆಸ್ಕ್ ಪವರ್‌ಮನ್‌ಗೆ ಗಾಯ

CESC powerman injured after falling from a tree

ಕೊಳ್ಳೇಗಾಲ: ಪಟ್ಟಣದಲ್ಲಿ ವಿದ್ಯುತ್ ತಂತಿಗೆ ತಗಲುತ್ತಿದ್ದ ರೆಂಬೆಗಳನ್ನು ಕತ್ತರಿಸುತ್ತಿದ್ದ ಸೆಸ್ಕ್ ಪವರ್‌ಮನ್ ಗುರುವಾರ ಮರದಿಂದ ಬಿದ್ದು ಗಾಯಗೊಂಡಿದ್ದಾರೆ.

ಸೆಸ್ಕ್ ಪವರ್‌ಮನ್, ಭೀಮನಗರ ಬಡಾವಣೆ ಪಾಲ ಚಾವಡೊ ಬೀದಿ ನಿವಾಸಿ ಸಾಗರ್ ಗಾಯಗೊಂಡವರು.

ಕೊಳ್ಳೇಗಾಲ ಸೆಸ್ಕ್ ಉಪವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್‌ಮನ್ ಸಾಗರ್, ಪಟ್ಟಣದ ಆದರ್ಶ ನಗರ ಬಡಾವಣೆಯಲ್ಲಿ ಎಂದಿನಂತೆ ವಿದ್ಯುತ್ ತಂತಿಗೆ ಅಡಚಣೆಯಾಗಿರುವ ರೆಂಬೆಗಳನ್ನು ಕತ್ತರಿಸಲು ಮರ ಹತ್ತಿದ್ದರು. ಕತ್ತರಿಸುವಾಗ ಆಯತಪ್ಪಿ ಕೆಳಗೆ ಬಿದ್ದು ಬೆನ್ನು ಭಾಗಕ್ಕೆ ಗಾಯವಾಗಿದೆ. ತಕ್ಷಣ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಬಳಿಕ, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ಕರೆದ್ಯೊಯಲಾಯಿತು.