ಚಾಮರಾಜನಗರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ವಿಚಾರದಲ್ಲಿ ಮುಖ್ಯ ಚುವಣೆ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ ಮತದಾರರ ಹಕ್ಕನ್ನು ರಕ್ಷಣೆ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಇಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನವೇಶ್ವರಿ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಮುಖ್ಯದ್ವಾರದ ಬಳಿ ಕುಳಿತು ಧರಣಿ ನಡೆಸಿದರು.
ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗೆ ಉಳಿಯಬಾರದು. ಬಿಎಲ್‌ಒ ಮತ್ತು ಇಆರ್‌ಒ ಮಟ್ಟದಲ್ಲಿ ನಡೆಯುವ ಪರಿಶೀಲನೆಗಳು ಪಾರದರ್ಶಕವಾಗಿರಬೇಕು. ಹೆಸರು ಸೇರ್ಪಡೆಯಾದ ಮತ್ತು ಕೈಬಿಟ್ಟವರಿಗೆ ಮರು ಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಾರಂ-7 ಅನ್ನು ದುರುಪಯೋಗ ಪಡಿಸಿಕೊಂಡು ಸಂಚನ್ನು ರೂಪಿಸಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಪೂರ್ವಪೀಡಿತರಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಂಚು ನಡೆಸುತ್ತಿರುವುದು ದಾಖಲೆಗಳ ಪ್ರಕಾರ ಧೃಡಪಟ್ಟಿದೆ ಎಂದರು.
ಚುನಾವಣೆ ಆಯೋಗದ ತಾಂತ್ರಿಕ ನಿರ್ವಹಣೆಯಲ್ಲಿ ಲೋಪದೋಷಗಳು ಕಂಡು ಬರುತ್ತಿರುವುದರಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿ ಪರಿಶೀಲನೆ ಮಾಡಿ ಪ್ರತಿಯೊಬ್ಬ ಮತದಾರರ ಹಕ್ಕು ಉಳಿಸುವ ನಿಟ್ಟಿನಲ್ಲಿ ಕಾರ್ಯ ರೂಪಿಸಬೇಕು. ಾರಂ 7 ಅರ್ಜಿ ಸಲ್ಲಿಸಿರುವ ಮತದಾರರ ಆಧಾರ್‌ಕಾರ್ಡ್ ಮತ್ತು ವಿಳಾಸ ಪರಿಶೀಲನೆ ಅಥವಾ ಅವರ ಸಂಬಂಧಿಕರ ಹೇಳಿಕೆಯ ಆಧಾರದ ಮೇಲೆ ತೆಗೆದು ಹಾಕುವ ಪ್ರಕ್ರಿಯೆ ಆಗಬೇಕು. ಮರಣ ಹೊಂದಿರುವ ಮತದಾರರಿಗೂ ಅರ್ಜಿ ಸಲ್ಲಿಸಿರುವ ಮತದಾರರಿಗೂ ಏನು ಸಂಬಂಧ ಎನ್ನುವ ಪರಿಶೀಲನೆ ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಮುಖಂಡರಾದ ಗೌಡಹಳ್ಳಿ ರಾಜೇಶ್, ಕೆರೆಹಳ್ಳಿ ನವೀನ್, ಆರ್.ಮಹದೇವ್, ಯೋಗೇಶ್, ಶಕುಂಲತಾ, ಚಿಕ್ಕಮಹದೇವ್,ಗುರುಸ್ವಾಮಿ, ನಲ್ಲೂರು ಸೋಮೇಶ್, ನಾಗವಳ್ಳಿ ನಾಗಯ್ಯ ಮತ್ತು ಇತರರು ಇದ್ದರು.