ಗುಂಡ್ಲುಪೇಟೆ: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17 ವರ್ಷದೊಳಗಿನ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್, ಬಾಲಕರ ಬಾಲ್ ಬ್ಯಾಡ್ಮಿಂಟನ್, ಬಾಲಕರ ಯೋಗ, ಬಾಲಕಿಯರ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಬಾಲಕರ ಉದ್ದ ಜಿಗಿತ, ಬಾಲಕಿಯರ ಗುಂಡು ಎಸೆತ, ಬಾಲಕರ ಡಿಸ್ಕಸ್ ಎಸೆತಗಳಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ ತ್ರಿವಿಧ ಜಿಗಿತದಲ್ಲಿ 3ನೇ ಸ್ಥಾನ, ಬಾಲಕರ 110 ಮೀ.ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ, ಬಾಲಕಿಯರ 100 ಮೀ.ಹರ್ಡಲ್ಸ್‌ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಬಾಲಕಿಯರ 400 ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ, ಬಾಲಕಿಯರ 3 ಕಿ.ಮೀ.ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.
14 ವರ್ಷದೊಳಗಿನ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್, ಬಾಲಕಿಯರ ಗುಂಡು ಎಸೆತ, ಬಾಲಕಿಯರ ಡಿಸ್ಕಸ್ ಥ್ರೋ ಹಾಗೂ ಬಾಲಕಿಯರ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಎಲ್ಲ ವಿಭಾಗದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.