ಗುಂಡ್ಲುಪೇಟೆ ತಾಲೂಕಿನ ಕಗ್ಗಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು. ಯೋಗೇಶ್, ದಿನೇಶ್, ಚಂದ್ರಶೇಖರ್, ಚೈತ್ರಾ, ನಾಗೇಶ್ ಇದ್ದರು.  
ಚಾಮರಾಜನಗರ

ಫಲಾನುಭವಿಗಳಿಗೆ ವಾತ್ಸಲ್ಯ ಮನೆ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ನಿರ್ಮಾಣ

ಗುಂಡ್ಲುಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ತಾಲೂಕಿನ ಕಗ್ಗಳ ಹಾಗೂ ಬಸವಾಪುರ ಗ್ರಾಮದಲ್ಲಿ ನಿರ್ಮಿಸಿದ ವಾತ್ಸಲ್ಯ ಮನೆಗಳನ್ನು ಸೋಮವಾರ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಕಗ್ಗಳ ಗ್ರಾಮದ ನಾಗಮ್ಮ ಮತ್ತು ಬಸವಾಪುರದ ಸಿದ್ದಮ್ಮ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಯೋಗೀಶ್, ಈವರೆಗೆ ಯೋಜನೆ ವತಿಯಿಂದ ರಾಜ್ಯಾದ್ಯಂತ 947 ವಾತ್ಸಲ್ಯ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ. ಲಅ್ಲದೆ ತಾಲೂಕಿನಲ್ಲಿ 62 ನಿರ್ಗತಿಕರಿಗೆ ತಿಂಗಳಿಗೆ ಸಾವಿರ ರೂ.ನಂತೆ ಹಣ ನೀಡಿ ಪ್ರತಿ ತಿಂಗಳು ವಾತ್ಸಲ್ಯ ಫುಡ್ ಹಾಗೂ ವಾಸ್ತಲ್ಯ ಕಿಟ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು.

ನಿರ್ಗತಿಕರಿಗೆ ಮಾಸಾಸನ, ವಾತ್ಸಲ್ಯ ಮನೆ ನಿರ್ಮಾಣ, ದೇವಸ್ಥಾನಗಳಿಗೆ ಅನುದಾನ, ಕೆರೆ ಕಾಮಗಾರಿ, ಶಿಷ್ಯ ನಿಧಿ, ಪ್ರಗತಿ ನಿಧಿ, ಆರೋಗ್ಯ ರಕ್ಷಾ, ಸಾಮೂಹಿಕ ಪೂಜೆ, ಶಾಲೆಗಳಿಗೆ ಡೆಸ್ಕ್-ಬೆಂಚ್ ವಿತರಣೆ, ಜ್ಞಾನದೀಪ ಶಿಕ್ಷಕರು, ಶುದ್ಧ್ದಗಂಗಾ ಘಟಕ.. ಹೀಗೆ ಹಲವಾರು ಕಾರ್ಯಕ್ರಮಗಳನ್ನು ಸಮಾಜಕ್ಕೆ ಪೂಜ್ಯರು ಹಾಗೂ ಹೇಮಾವತಿ ಅಮ್ಮ ಕೊಡುಗೆಯಾಗಿ ನೀಡುತ್ತಿದ್ದಾರೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ಜಿಲ್ಲಾ ಜನಜಾಗೃತಿ ವೇದಿಕೆ ನಾಗೇಶ್, ಯೋಜನಾಧಿಕಾರಿ ಚಂದ್ರಶೇಖರ್, ಸಮನ್ವಯಾಧಿಕಾರಿ ಚೈತ್ರಾ, ಮೇಲ್ವಿಚಾರಕಿ ರಾಜೇಶ್ವರಿ, ಸೇವಾ ಪ್ರತಿನಿಧಿಗಳಾದ ಮಹದೇವಮ್ಮ, ಸುನೀತಾ ಇತರರಿದ್ದರು.