ಗುಂಡ್ಲುಪೇಟೆ: ಕರಡಿಯೊಂದು ಮಂಚಹಳ್ಳಿ ಗ್ರಾಮದ ಮಂಗಳಾದೇವಿ ದೇವಸ್ಥಾನದ ಒಳಗೆ ಪ್ರವೇಶಿಸಿ ತೆರಳಿದ ಘಟನೆ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯದ ಕಾಡಂಚಿನ ಗ್ರಾಮದ ದೇಗುಲದ ಆವರಣದಲ್ಲಿ ಭಾನುವಾರ ಸಂಜೆ 4 ಗಂಟೆ ವೇಳೆಗೆ ಕರಡಿ ಓಡಾಡಿ, ನಂತರ ಗುಡ್ಡದತ್ತ ತೆರಳಿರುವ ದೃಶ್ಯವನ್ನು ಸ್ಥಳೀಯ
ದನ ಗಾಹಿಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರಣ್ಯ ಇಲಾಖೆಯು ಗ್ರಾಮದಲ್ಲಿ ಗಸ್ತು ಹೆಚ್ಚಿಸಿ, ಕರಡಿ ಮತ್ತೆ ಗ್ರಾಮದ ವ್ಯಾಪ್ತಿಗೆ ಪ್ರವೇಶಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.