ವಿಜಯವಾಣಿ ಸುದ್ದಿಜಾಲ ಹನೂರು
ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಬುಧವಾರ ಚಿರತೆ ದಾಳಿಗೆ 4 ಮೇಕೆಗಳು ಬಲಿಯಾಗಿವೆ.
ಗ್ರಾಮದ ಶಿವಮ್ಮ ಎಂಬುವರು ಜಮೀನಿನ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕಟ್ಟಿ ಹಾಕಿದ್ದರು. ಬೆಳಗಿನ ಜಾವ ಸಮೀಪದ ಅರಣ್ಯ ಪ್ರದೇಶದಿಂದ ಬಂದ ಚಿರತೆ 4 ಮೇಕೆಗಳ ಮೇಲೆ ದಾಳಿ ನಡೆಸಿ ಎಳೆದೊಯ್ದು ಸಾಯಿಸಿದೆ. ಮೇಕೆಗಳ ಚೀರಾಟದ ಶಬ್ದ ಕೇಳಿ ಮನೆಯವರು ಹೊರ ಬಂದಾಗ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಈ ಬಗ್ಗೆ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್ ಅವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ಡಿಆರ್‌ಎಫ್ ನಂದೀಶ್ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.
ಈ ವೇಳೆ ಅಮ್ಜಾದ್ ಖಾನ್ ಮಾತನಾಡಿ, ಚಿರತೆ ಸೆರೆ ಹಿಡಿಯುವಂತೆ ಹಾಗೂ ಮೇಕೆಗಳ ಸಾವಿಗೆ ಇಲಾಖೆಯಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿದರು. ಇದಕ್ಕೆ ಆರ್‌ಎಫ್‌ಒ ಅವರು ಪ್ರತಿಕ್ರಿಯಿಸಿ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಬೋನು ಇರಿಸಿ ಚಿರತೆ ಸೆರೆಗೆ ಅಗತ್ಯ ಕ್ರಮವಹಿಸಲಾಗುವುದು. ಪರಿಹಾರದ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.