ಪಳನಿಮೇಡು ಗ್ರಾಮದಲ್ಲಿ ಕಾಡು ಹಂದಿಯಿಂದ ಗಾಯಗೊಂಡು ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಪರಮೇಶ್‌ನನ್ನು ಆರ್‌ಎಫ್‌ಒ ಮಾದೇಶ್ ಭೇಟಿ ಮಾಡಿದರು. ಅಮ್ಜಾದ್ ಖಾನ್, ವೆಂಕಟಾಚಲ ಇತರರಿದ್ದರು. 
ಚಾಮರಾಜನಗರ

ಕಾಡು ಹಂದಿ ದಾಳಿಯಿಂದ ರೈತನಿಗೆ ಗಾಯ

Farmer injured in wild boar attack

ಹನೂರು: ತಾಲೂಕಿನ ರಾಮಾಪುರ ಸಮೀಪದ ಪಳನಿಮೇಡು ಗ್ರಾಮದ ಜಮೀನಿನಲ್ಲಿ ಸೋಮವಾರ ಕಾಡು ಹಂದಿ ದಾಳಿಯಿಂದ ರೈತ ಪರಮೇಶ್ (60)ಎಂಬುವರು ಗಾಯಗೊಂಡಿದ್ದಾರೆ.

ಜಮೀನಿನಲ್ಲಿದ್ದ ಮನೆಯ ಮುಂಭಾಗ ಪರಮೇಶ್ ಮಲಗಿದ್ದ ವೇಳೆ ಬೆಳಗಿನ ಜಾವ 5.45ರಲ್ಲಿ ಕಾಡು ಹಂದಿ ದಾಳಿ ನಡೆಸಿದೆ. ಗಾಯಗೊಂಡ ರೈತನನ್ನು ಕುಟುಂಬಸ್ಥರು ಕೊಳ್ಳೇಗಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ಜಾದ್ ಖಾನ್ ಹಾಗೂ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಕೂಡಲೂರು ವೆಂಕಟಾಚಲ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಬಳಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಮಾದೇಶ್ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಚಿಕಿತ್ಸಾ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು. ಪರಿಹಾರ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.