ಪುದು ರಾಮಾಪುರದಲ್ಲಿ ನಡೆದ ಶ್ರೀ ಶಕ್ತಿ ಮಾರಮ್ಮ ಜಾತ್ರೆಯಲ್ಲಿ ಯುವಕರು ಗುಂಡು ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  
ಚಾಮರಾಜನಗರ

ಗುಂಡು ಎತ್ತುವ ಮೂಲಕ ಯುವಕರ ಶಕ್ತಿ ಪ್ರದರ್ಶನ

ಪ್ರಮುಖ ಮುಖ್ಯಾಂಶಗಳು

  • ಪುದು ರಾಮಾಪುರ ಗ್ರಾಮದಲ್ಲಿ ಶ್ರೀ ಶಕ್ತಿ ಮಾರಮ್ಮನ ಜಾತ್ರೆ ಪ್ರಯುಕ್ತ
ಹನೂರು: ತಾಲೂಕಿನ ರಾಮಾಪುರ ಸಮೀಪದ ಪುದು ರಾಮಾಪುರ ಗ್ರಾಮದಲ್ಲಿ ಗುರುವಾರ ನಡೆದ ಶ್ರೀ ಶಕ್ತಿ ಮಾರಮ್ಮನ ಜಾತ್ರೆಯಲ್ಲಿ ಯುವಕರು ಗುಂಡು ಎತ್ತುವ ಮೂಲಕ ಶಕ್ತಿ ಪ್ರದರ್ಶಿಸಿದರು.
ಶ್ರೀ ಶಕ್ತಿ ಮಾರಮ್ಮನ ಜಾತ್ರೆಯಲ್ಲಿ ಪ್ರತಿ ವರ್ಷ ಗುಂಡು ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಮದುವೆಗೆ ಸಿದ್ದವಾಗಿರುವ ಯುವಕರು ಗುಂಡು ಎತ್ತುವುದು ವಾಡಿಕೆ. ಅದರಂತೆಯೇ ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಮಾಪುರ ಸುತ್ತಮುತ್ತಲಿನ ಯುವಕರು 100 ಕೆ.ಜಿ ಗುಂಡು ಎತ್ತುವುದರ ಮೂಲಕ ಶಕ್ತಿ ಪ್ರದರ್ಶಿಸಿದರು. ನೆರೆದಿದ್ದವರು ಜೈಕಾರ ಕೂಗುವುದರ ಮೂಲಕ ಯುವಕರಲ್ಲಿ ಉತ್ಸಾಹ ಮೂಡಿಸಿದರು.