ಯಳಂದೂರು ಪಟ್ಟಣದ ಯರಿಯೂರು ಗ್ರಾಮದ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಜೆ.ಯೋಗೇಶ್ ಅವರನ್ನು ಎಆರ್‌ಕೆ ಅಭಿಮಾನಿ ಬಳಗದ ಕಂದಹಳ್ಳಿ ನಂಜುಂಡಸ್ವಾಮಿ, ಗೋವಿಂದರಾಜು, ವಿಜಯ್ ಉಪ್ಪಾರ್ ಸೇರಿದಂತೆ ಅನೇಕರು ಅಭಿನಂದಿಸಿದರು.
ಯಳಂದೂರು: ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಜೆ.ಯೋಗೇಶ್ ಅವರಿಗೆ ಎಆರ್‌ಕೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಬಳಗದ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಜೆ.ಯೋಗೇಶ್ ಜಿಲ್ಲೆಯ ಪ್ರಭಾವಿ ರಾಜಕಾರಣಿ ಹಾಗೂ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಹಿಂದುಳಿದ ಉಪ್ಪಾರ ಜನಾಂಗಕ್ಕೆ ಸೇರಿರುವ ಅವರನ್ನು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಅವರಿಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಸಮರ್ಥವಾಗಿ ಕೆಲಸ ಮಾಡಲಿದ್ದಾರೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಗೋವಿಂದರಾಜು, ವಿಜಯ್ ಉಪ್ಪಾರ್, ಕೆಸ್ತೂರು ಯೋಗೇಶ್ ಸೇರಿದಂತೆ ಅನೇಕರು ಇದ್ದರು.