ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಸೋಮವಾರ ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ಎಂ.ನಂಜುಂಡಸ್ವಾಮಿ ಅವರು ನಂದಿನಿ ಗುಡ್ ಲೈಫ್ ಹಾಲನ್ನು ವಿತರಣೆ ಮಾಡಿದರು. ಸೈಯದ್ ಮನ್ಸೂರ್ ಉಲ್ಲಾ, ಶ್ರೀನಿವಾಸ್ ಪ್ರಸಾದ್ ಇತರರು ಇದ್ದಾರೆ. 
ಚಾಮರಾಜನಗರ

ಹೈನುಗಾರಿಕೆ ಉತ್ತೇಜಿಸಲು ವಿಶ್ವ ಹಾಲಿನ ದಿನಾಚರಣೆ

ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾಮಿ ಮಾಹಿತಿ

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳಿಗೆ, ಬಾಣಂತಿಯರಿಗೆ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಸೋಮವಾರ ಚಾಮುಲ್ ಮತ್ತು ಹಾಲು ಮಾರಾಟಗಾರರ ವತಿಯಿಂದ ನಂದಿನಿ ಗುಡ್ ಲೈಫ್ ಹಾಲನ್ನು ವಿತರಿಸಿದರು.
ಬಾಣಂತಿಯರಿಗೆ ಗುಡ್‌ಲೈಫ್ ಹಾಲು ವಿತರಣೆ ಮಾಡಿದ ಬಳಿಕ ಚಾಮುಲ್ ಅಧ್ಯಕ್ಷ ಮಧುವನಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ಜೂ.1ರಂದು ವಿಶ್ವ ಹಾಲಿನ ದಿನವನ್ನು ಆಚರಿಸಲಾಗುತ್ತಿದೆ. ಹಾಲಿನ ಪೌಷ್ಟಿಕಾಂಶದ ಮೌಲ್ಯದ ಬಗ್ಗೆ ಜನ ಜಾಗೃತಿ ಮೂಡಿಸಲು ಹಾಗೂ ಜಾಗತಿಕವಾಗಿ ಹೈನುಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವ ಹಾಲಿನ ದಿನಾಚರಣೆ ಮಾಡಲಾಗುತ್ತಿದೆ. ಇಂದು ಜಿಲ್ಲಾ ವ್ಯಾಪ್ತಿಯ ತಾಲೂಕು ಅಸ್ಪತ್ರೆಗಳಲ್ಲಿ ಚಾಮುಲ್ ವತಿಯಿಂದ ಹಾಲನ್ನು ವಿತರಣೆ ಮಾಡಲಾಗುತ್ತಿದ್ದು. ಅಂತೆಯೇ, ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿರುವ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ, ಮಕ್ಕಳಿಗೆ ನಂದಿನಿ ಗುಡ್ ಲೈಫ್ ಹಾಲನ್ನು ವಿತರಣೆ ಮಾಡಲಾಗಿದೆ. ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆವಿಗೆ ಹಾಲನ್ನು ಸೇವಿಸುವುದರಿಂದ ಪೌಷ್ಟಿಕಾಂಶ ದೊರೆಯುತ್ತದೆ. ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಚಾಮುಲ್ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಮೃತ ಹಾಲು ಉತ್ಪಾದಕರ ಸದಸ್ಯರ 12 ವಾರಸುದಾರರಿಗೆ ತಲಾ 15 ಸಾವಿರ ರೂ.ಗಳ ಚೆಕ್ ವಿತರಿಸಲಾಯಿತು.
ಚಾಮುಲ್ ಅಸಿಸ್ಟೆಂಟ್ ಮ್ಯಾನೇಜರ್ ಸೈಯದ್ ಮನ್ಸೂರ್ ಉಲ್ಲಾ, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್ ಪ್ರಸಾದ್, ಸೋಮಶೇಖರ್, ಕೊಳ್ಳೇಗಾಲ ತಾಲೂಕಿನ ಹಾಲು ಮಾರಾಟಗಾರರು, ವ್ಯೆದ್ಯರಾದ ಚೇತನ್ ಇತರರು ಇದ್ದರು.