ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ಸಂವಿಧಾನದ 131ನೇ ತಿದ್ದುಪಡಿ ವಿಧೇಯಕ ಅಂಗೀಕಾರ ಹಾಗದೇ ಇರುವುದನ್ನು ಗುಂಡ್ಲುಪೇಟೆಯ ಬಿಜೆಪಿ ಮಹಿಳಾ ಮೋರ್ಚ ಪದಾಧಿಕಾರಿಗಳು ಖಂಡಿಸಿದರು. ಮಂಗಳಮ್ಮಾ ಕಮಲಮ್ಮಾ, ಸುನಂದಾ ಇತರರಿದ್ದರು.  
ಚಾಮರಾಜನಗರ

ವಿಪಕ್ಷಗಳಿಗೆ ಮಹಿಳಾ ಮತದಾರರು ತಕ್ಕ ಪಾಠ ಕಲಿಸಿ

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೋರ್ಚ ತಾಲೂಕು ಅಧ್ಯಕ್ಷೆ ಮಂಗಳಮ್ಮಾ ಮನವಿ
  • ಸಂವಿಧಾನದ 131 ನೇ ತಿದ್ದುಪಡಿ ವಿಧೇಯಕ ಅಂಗೀಕಾರ ಆಗದೇ ಇರುವುದಕ್ಕೆ ತೀವ್ರ ಖಂಡನೆ
ಗುಂಡ್ಲುಪೇಟೆ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ಉದ್ದೇಶದಿಂದ ಮಂಡಿಸಲಾದ ಸಂವಿಧಾನದ 131ನೇ ತಿದ್ದುಪಡಿ ವಿಧೇಯಕ ಅಂಗೀಕಾರ ಹಾಗದೇ ಇರುವುದನ್ನು ಗುಂಡ್ಲುಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದರು.
ಪಟ್ಟಣದ ಬಿಜೆಪಿ ಕಚೇರಿ ಮುಂದೆ ಶನಿವಾರ ಸಮಾವೇಶಗೊಂಡ ಸದಸ್ಯರು ಮಸೂದೆ ಸೋಲಲು ಕಾರಣರಾದ ವಿರೋಧ ಪಕ್ಷಗಳ ವಿರುದ್ಧ ದಿಕ್ಕಾರ ಘೋಷಣೆ ಕೂಗಿದರು.
ಮಹಿಳಾ ಮೋರ್ಚ ತಾಲೂಕು ಅಧ್ಯಕ್ಷೆ ಮಂಗಳಮ್ಮಾ ಮಾತನಾಡಿ ಗುರುವಾರ ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗಿದ್ದ ಸಂವಿಧಾನದ 131 ನೇ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ಮತಕ್ಕೆ ಹಾಕಲಾಯಿತು. ಆದರೆ ವಿಧೇಯಕದ ವಿರುದ್ಧವಾಗಿ ವಿಪಕ್ಷಗಳು ಮತ ಹಾಕಿದ ಕಾರಣ ಸೋಲು ಉಂಟಾಯಿತು. ಕೇಂದ್ರದ ಎನ್‌ಡಿಎ ಸರಕಾರವು ಮಹಿಳಾ ಮೀಸಲಾತಿಯ ಮೂಲಕ ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಲು ಮುಂದಾಗಿದೆ. ಹೀಗಿದ್ದರೂ ವಿಧೇಯಕ ಬೆಂಬಲಿಸದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಪರವಾದ ವಿಧೇಯಕ ಬೆಂಬಲಿಸದ ವಿಪಕ್ಷಗಳಿಗೆ ಮಹಿಳಾ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಕಮಲಮ್ಮಾ, ಮುಖಂಡರಾದ ಸುನಂದಾ, ಪಾರ್ವತವಮ್ಮಾ, ಶಿವಮ್ಮಾ, ಅನು, ಸರಸ್ವತಿ, ಸಾವಿತ್ರಿ ತಿಮ್ಮಮ್ಮಾ, ಹೂರದಹಳ್ಳಿಶಂಕ್ರಮ್ಮಾ ಹಾಜರಿದ್ದರು.