ಪೊನ್ನಾಚಿ ಮಾರ್ಗದಲ್ಲಿ ಕಾಣಿಸಿಕೊಂಡ ಕಾಡಾನೆ.
ಹನೂರು: ತಾಲೂಕಿನ ಪೊನ್ನಾಚಿ ಮಾರ್ಗದ ಜೇನುಹಳ್ಳದ ಬಳಿ ಸೋಮವಾರ ಕಾಡಾನೆಯೊಂದು ಕಾಣಿಸಿಕೊಂಡು ವಾಹನ ಸವಾರರಲ್ಲಿ ಕೆಲಕಾಲ ಆತಂಕ ಉಂಟು ಮಾಡಿತು.
ಈ ಮಾರ್ಗವು ಸಂಪೂರ್ಣ ಅರಣ್ಯ ಪ್ರದೇಶದ ನಡುವೆ ಹಾದು ಹೋಗಿದ್ದು, ಆಗಾಗ್ಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಕಳೆದ 2 ತಿಂಗಳಿನಿಂದೀಚೆಗೆ ಕಾಣಿಸಿಕೊಂಡಿರಲಿಲ್ಲ. ಮಂಗಳವಾರ ಸುಮಾರು 11ರ ವೇಳೆಯಲ್ಲಿ ಕಾಡಾನೆಯೊಂದು ರಸ್ತೆಗೆ ಅಡ್ಡಲಾಗಿ ನಿಂತಿತ್ತು.
ಈ ವೇಳೆ ಸಂಚರಿಸುತ್ತಿದ್ದ ವಾಹನ ಸವಾರರು ಕೆಲಕಾಲ ಆತಂಕಕ್ಕೆ ಒಳಗಾದರು. ಆನೆ ಅರಣ್ಯ ಪ್ರದೇಶದತ್ತ ತೆರಳಿದ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಟ್ಟು ಪಯಣ ಮುಂದುವರಿಸಿದರು.