ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮನವಿ ಸಲ್ಲಿಸಲ್ಲಿ ಬಂದಿದ್ದ ಪಿಡಬ್ಲೂೃಡಿ ಕಾಲನಿ ಮತ್ತು ಹೌಸಿಂಗ್ ಬೋರ್ಡ್ ನಿವಾಸಿಗಳೊಂದಿಗೆ ಡಿಸಿ ಶ್ರೀರೂಪಾ ಸಭೆ ನಡೆಸಿದರು. 
ಚಾಮರಾಜನಗರ

ಡಿಸಿ ವಾಸವಿರುವ ಬಡಾವಣೆಯಲ್ಲೇ ನೀರಿಗೆ ಬರ

ಪ್ರಮುಖ ಮುಖ್ಯಾಂಶಗಳು

  • ಹೌಸಿಂಗ್ ಬೋರ್ಡ್, ಪಿಡಬ್ಲೂೃಡಿ ಕಾಲನಿ ನಿವಾಸಿಗಳ ಪರದಾಟ
  • ಮನವಿ ಸಲ್ಲಿಸಿದ ನಿವಾಸಿಗಳು
ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರ್ ಸೇರಿ ಉನ್ನತ ಅಧಿಕಾರಿಗಳಿರುವ ಚಾಮರಾಜನಗರದ ಬಡಾವಣೆಗಳಲ್ಲೇ ಜಲಕ್ಷಾಮ ಎದುರಾಗಿದ್ದು, ಕಳೆದ 15 ದಿನಗಳಿಂದ ನೀರು ಪೂರೈಕೆಯಾಗದೆ ಜನರು ಪಡಿಪಾಟಲು ಪಡುತ್ತಿದ್ದಾರೆ.
ನಗರದ ಪಿಡಬ್ಲೂೃಡಿ ಕಾಲನಿ, ಹೌಸಿಂಗ್ ಬೋರ್ಡ್‌ಗಳಲ್ಲಿ 15 ದಿನಕ್ಕೊಮ್ಮೆ ಅರ್ಧ ತಾಸು ನೀರನ್ನೂ ಕೂಡ ಪೂರೈಕೆ ಮಾಡುತ್ತಿಲ್ಲ, ಬಡಾವಣೆಯಲ್ಲಿ ಬಹುಪಾಲು ಮಂದಿ ನೌಕರರೇ ಇದ್ದು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶ್ರೀರೂಪಾ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರು. ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡರು. ಚಾಮರಾಜನಗರ ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಈ ಸಂಬಂಧ ಡಿಸಿ ಶ್ರೀರೂಪಾ ನಗರಸಭೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದಾಗ ಸುಳ್ಳು ಉತ್ತರ ನೀಡಿದ್ದರಿಂದ ನಿವಾಸಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವಾರ್ಡ್ ನಂ 26ಕ್ಕೆ 2 ದಿನಕ್ಕೊಮ್ಮೆ ನೀರು ಬಿಡುತ್ತಿರುವುದಾಗಿ ನಗರಸಭೆ ಆಯುಕ್ತ ಹಾಗೂ ಇಂಜಿನಿಯರ್ ಗಳು ಮಾಹಿತಿ ನೀಡಿದ್ದಕ್ಕೆ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಪೂರೈಕೆ ಮಾಡಿಲ್ಲ ಎಂದು ನಿವಾಸಿಗಳು ಹೇಳುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ಶ್ರೀರೂಪಾ ಕೆಂಡಾಮಂಡಲರಾದರು.
ನನ್ನ ಮನೆಯೂ ಇದೆ..:
ಇದೇ ವಾರ್ಡ್‌ನದಲ್ಲಿ ತನ್ನ ಮನೆಯೂ ಇದೇ. ನೀರಿನ ಸಮಸ್ಯೆ ಆಗಿರುವುದು ನಿಜ ಎಂದು ಡಿಸಿ ಮಾಧ್ಯಮದವರೊಂದಿಗೆ ಮಾತನಾಡುವಾಗ ತಿಳಿಸಿದರು. ಈಗಾಗಲೇ ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದ್ದು, ಕೊಳವೆ ಬಾವಿ ಕೊರೆಯಲು, ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಹೇಳಿದ್ದೇನೆ. ಮೇ 15 ರೊಳಗೆ ಅಮೃತ್ ಯೋಜನೆ ಸಮಸ್ಯೆ ಬಗೆಹರಿಯಲಿದೆ. ಹೊಸ ಯೋಜನೆ ಪ್ರಗತಿಯ ಜತೆಗೆ ಹಳೇ ಸಂಪರ್ಕದಲ್ಲಿ ನೀರು ಪೂರೈಸುವಂತೆ ಸೂಚಿಸಿದ್ದೇನೆ ಎಂದರು. ತ್ವರಿತ ಸಮಸ್ಯೆ ಪರಿಹಾರಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಮನವಿ ಸಲ್ಲಿಸಿದ ನಿವಾಸಿಗಳು:
ನಗರದ 26ನೇ ವಾರ್ಡ್‌ನ ಾರೆಸ್ಟ್ ನರ್ಸರಿ ರೋಡ್, ಪಿಡಬ್ಲೂೃಡಿ ಕಾಲನಿಗಳಲ್ಲಿ ವಾರಕ್ಕೆ ಒಂದು ಬಾರಿ ನೀರು ಬರುತ್ತಿತ್ತು. ಇದನ್ನು ನೀರಿನ ತೊಟ್ಟಿಗಳಲ್ಲಿ ಶೇಖರಣೆ ಮಾಡಿಕೊಂಡು ಉಪಯೋಗಿಸುತ್ತಿದ್ದೆವು. ಆದರೆ ಈಗ ವಾಟರ್ ಬೋರ್ಡ್‌ನವರು ಪೈಪ್‌ಲೈನ್ ಅಳವಡಿಸಿ, ಮನೆಯ ನಲ್ಲಿಗಳಿಗೆ ಮೀಟರ್ ಅಳವಡಿಸಿದ್ದಾರೆ. ಆದರೆ ನಲ್ಲಿಯಲ್ಲಿ ವಾರಕ್ಕೆ ಒಂದು ಬಾರಿ 2 ಗಂಟೆಯಷ್ಟೇ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ದಿನ ನಿತ್ಯದ ಬಳಕೆಗೆ ನೀರು ಸಾಲುತ್ತಿಲ್ಲ. ಕೆಲವೊಮ್ಮೆ 15 ದಿನಗಳಾದರೂ ನೀರು ಬಿಡುತ್ತಿಲ್ಲ. ತಕ್ಷಣ ಸಮಸ್ಯೆ ಬಗೆಹರಿಸಲು ಬೋರ್‌ವೆಲ್ ಕೊರಿಸಿ ನೀರು ಸರಬರಾಜು ಮಾಡಬೇಕೆಂದು ಬಡಾವಣೆಯ ನಿವಾಸಿಗಳಾದ ಮಮತಾ, ವಸಂತಮ್ಮ, ರೂಪಾ, ಹೇಮಾ, ಶೈಲಾ, ಪ್ರೇಮಲೀಲಾ, ಲತಾ, ರಾಜಮ್ಮ, ವಿಜಯಾಂಭ, ರೇಖಾ, ಸ್ನೇಹ, ಶಿವಪ್ರಸಾದ್ ಮತ್ತು ಇತರರು ಮನವಿ ಮಾಡಿದರು.
"

ಕಳೆದ 6 ತಿಂಗಳಿನಿಂದ ಅಮೃತ್ ಯೋಜನೆ ಕಾಮಗಾರಿ ಪೈಪ್‌ಲೈನ್ ಶುರು ಮಾಡಿದ್ದಾಗಿನಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಯೋಜನೆಯ ಇಂಜಿನಿಯರ್‌ಗಳನ್ನು ಕೇಳಿದರೆ ಕಾಮಗಾರಿ ಮುಗಿದಿದೆ. ನಗರಸಭೆಯಿಂದ ಟ್ಯಾಂಕ್‌ಗೆ ನೀರು ತುಂಬಿಸಿಕೊಡಲು ಹೇಳಿ ಎನ್ನುತ್ತಿದ್ದಾರೆ. ಆದರೆ ನಗರಸಭೆಯವರು ಸ್ಪಂದಿಸುತ್ತಿಲ್ಲ. ಬೇಸಿಗೆ ಕಾಲವಾಗಿರುವುದರಿಂದ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗುತ್ತಿಲ್ಲ.

— ಕುಮುದಾ ಕೇಶವಮೂರ್ತಿ, ನಗರಸಭೆ ಮಾಜಿ ಸದಸ್ಯೆ, ಚಾಮರಾಜನಗರ