ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಜೆಜೆಎಂನಲ್ಲಿ ಸಂಪರ್ಕದ ಪೈಪ್ ಒಡೆದು ನೀರು ಪೋರಾಗುತ್ತಿರುವುದು.
- ಜಲಜೀವನ್ ಮಿಷನ್ ಯೋಜನೆಯ ನಲ್ಲಿ ಸಂಪರ್ಕದ ಪೈಪ್ ಒಡೆದು ಪೋಲು
ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ನಲ್ಲಿ ಸಂಪರ್ಕದ ಪೈಪ್ ಒಡೆದು ನೀರು ಪೋಲಾಗುತ್ತಿದ್ದು, ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಾಹನಗಳು ಸಂಚರಿಸಿದಾಗ ಪೈಪ್ ಒಡೆದು ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಇದರಿಂದ ಸೋರಿಕೆ ನೀರು ಸಂಗ್ರಹವಾಗುವ ರಸ್ತೆ ಹಾಳಾಗುವ ಜತೆಗೆ ಅದೇ ಸ್ಥಳದಲ್ಲಿ ವಾಹನಗಳು ಸಂಚರಿಸುವಾಗ ಕೆಸರು ಅಕ್ಕಪಕ್ಕದ ಮನೆಗಳಿಗೆ ರಾಚುತ್ತಿದೆ. ಇದೇ ರೀತಿ ಹಲವು ಕಡೆಗಳಲ್ಲಿ ಪೈಪ್‌ಲೈನ್ ಒಡೆದು ಸಮಸ್ಯೆಗಳು ಸೃಷ್ಟಿಯಾಗಿವೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮಹದೇವಪ್ಪ, ಸಿದ್ದರಾಜು, ಪ್ರಕಾಶ, ಕುಮಾರ, ಗುರುಪ್ರಸಾದ್ ಒತ್ತಾಯಿಸಿದ್ದಾರೆ.