ಲೊಕ್ಕನಹಳ್ಳಿಯಲ್ಲಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆಯಿಂದ ಕೋಳಿಗೆ ಲಸಿಕೆ ಹಾಕಲಾಯಿತು. 
ಚಾಮರಾಜನಗರ

ಕೋಳಿಗಳಿಗೆ ಕೊಕ್ಕರೆ ರೋಗ ತಡೆ ಲಸಿಕೆ

ಪ್ರಮುಖ ಮುಖ್ಯಾಂಶಗಳು

  • Vaccination
ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಇಲಾಖೆಯಿಂದ ಕೋಳಿಗಳಿಗೆ ಕೊಕ್ಕರೆ ರೋಗ ತಡೆಯುವ ಲಸಿಕೆಯನ್ನು ಶನಿವಾರ ಹಾಕಲಾಯಿತು.
ಗ್ರಾಮದಲ್ಲಿ ನಾಟಿ ಕೋಳಿಗಳು ರೋಗ ಬಂದು ಸಾಯುತ್ತಿರುವುದಾಗಿ ಕೆಲವರು ದೂರಿದ್ದರು. ಪಶು ಆಸ್ಪತ್ರೆಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ವಿಷಯ ತಿಳಿದ ಬಳಿಕ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಗ್ರಾಮಕ್ಕೆ ಭೇಟಿ ನೀಡಿದ್ದರು. ಸತ್ತಿದ್ದ ಕೋಳಿಯ ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಸಿದ್ದರಾಜು ಕೊಕ್ಕರೆ ರೋಗದ ಲಕ್ಷಣಗಳು ಕಂಡುಬಂದಿರುವುದನ್ನು ಗುರುತಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಾಕಣೆ ಮಾಡುತ್ತಿರುವ ಕೋಳಿಗಳಿಗೆ ಕೊಕ್ಕರೆ ರೋಗ ತಡೆಗಟ್ಟುವ ಲಸಿಕೆಯನ್ನು ಹಾಕಲಾಯಿತು. ಪಶುಪಾಲನಾ ಇಲಾಖೆಯಿಂದ ಚಿಕಿತ್ಸಾ ಸೌಲಭ್ಯ ದೊರೆಯುತ್ತಿಲ್ಲವೆಂದು ಪ್ರಾರಂಭದಲ್ಲಿ ದೂರಿದ್ದ ಗ್ರಾಮಸ್ಥ ಪ್ರಕಾಶ್ ವಿಜಯವಾಣಿಯೊಂದಿಗೆ ಮಾತನಾಡಿ, ಕೋಳಿಗಳಿಗೆ ಲಸಿಕೆ ಹಾಕುತ್ತಿದ್ದಾರೆ. ಗ್ರಾಮದ ಪಶು ಆಸ್ಪತ್ರೆಗೆ ವೈದ್ಯರು, ಸಲಕರಣೆಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.