ಶೂಟೌಟ್‌ನಲ್ಲಿ ಮೃತಪಟ್ಟ ಮೂವರಿಗೆ ಮಾರ್ಟಳ್ಳಿ ಚರ್ಚ್‌ನಲ್ಲಿ ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಚಾಮರಾಜನಗರ

ಶೂಟೌಟ್‌ನಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ

ಪ್ರಮುಖ ಮುಖ್ಯಾಂಶಗಳು

  • shootout

ಹನೂರು: ಶೂಟೌಟ್‌ನಲ್ಲಿ ಮೃತಪಟ್ಟ ಮೂವರಿಗೆ ಶುಕ್ರವಾರ ಸಂಜೆ ತಾಲೂಕಿನ ಮಾರ್ಟಳ್ಳಿ ಸಂತ ಲೂರ್ದು ಮಾತೆ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಜೆ 5.30ರ ವೇಳೆಯಲ್ಲಿ ಫಾದರ್ ವಿನ್ಸೆಂಟ್ ಅವರ ನೇತೃತ್ವ ಹಾಗೂ ಭಕ್ತರ ಸಮ್ಮುಖದಲ್ಲಿ ತಾಲೂಕಿನ ಲಾಸರ್ ದೊಡ್ಡಿಯ ಕುಮಾರ್, ಮರಿಯಮಂಗಲ ಗ್ರಾಮದ ಅಂತೋಣಿ ಸ್ವಾಮಿ ಹಾಗೂ ಜಗನ್ನಾಥದೊಡ್ಡಿಯ ಜಾನ್ ರೋಸ್ ಪೀಟರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಚರ್ಚ್ ಸುತ್ತಲೂ ಮೇಣದ ಬತ್ತಿ ಬೆಳಗಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.