ಗುಂಡ್ಲುಪೇಟೆಯಲ್ಲಿ ನನ್ನ ಮರ ನನ್ನ ನೆರಳು ಅಭಿಯಾನದ ನಗದು ಬಹುಮಾನಕ್ಕೆ 5 ಮಂದಿ ಅದೃಷ್ಟಶಾಲಿಗಳನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿದ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ, ಪುರಸಭೆ ಇಂಜಿನಿಯರ್ ಮಂಜುನಾಥ್, ಅಧಿಕಾರಿ ಮೂರ್ತಿ, ಮತ್ತು ನೌಕರರಾದ ತ್ರಿವೇಣಿ, ಹೇಮಾ ಇತರರು ಇದ್ದರು.  
ಚಾಮರಾಜನಗರ

ನನ್ನ ಮರ, ನನ್ನ ನೆರಳು ವಿಜೇತರ ಆಯ್ಕೆ

ಎ. ಆರ್. ರಘುರಾಮ
ಗುಂಡ್ಲುಪೇಟೆ : ಪಟ್ಟಣ ಪುರಸಭಾ ಸಭಾಭವನದಲ್ಲಿ ಬುಧವಾರ ‘ನನ್ನ ಮರ, ನನ್ನ ನೆರಳು’ ಅಭಿಯಾನದ ವಿಜೇತರ ಆಯ್ಕೆ ಮಾಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ನೇತೃತ್ವದಲ್ಲಿ ಅದೃಷ್ಟಶಾಲಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನಗದು ಬಹುಮಾನಕ್ಕೆ 5 ಮಂದಿ ಅದೃಷ್ಟಶಾಲಿಗಳನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ತಮ್ಮ ಮನೆಗಳ ಮುಂದೆ ಗಿಡ ನೆಟ್ಟು ನನ್ನ ಮರ, ನನ್ನ ನೆರಳು ಅಭಿಯಾನದ ಪಾಲ್ಗೊಂಡಿದ್ದ 83 ಮಂದಿ ಪೈಕಿ ಅದೃಷ್ಟಶಾಲಿಗಳಾಗಿ ವಯಸ್ಕರ ವಿಭಾಗದಿಂದ ಅಂಜನ್ ಜೀವನ್, ಎಸ್.ಗೀತಾ, ಕಿರಣ್, ಜಿ.ತನುಶ್ರೀ, ಮಕ್ಕಳ ವಿಭಾಗದಿಂದ ಸದ್ವಿಕ್ ಆಯ್ಕೆಯಾದರು. ಇವರಿಗೆ ತಲಾ ಒಂದು ಸಾವಿರ ರೂ. ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಘೋಷಣೆ ಮಾಡಲಾಯಿತು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಮಾತನಾಡಿ, ಗುಂಡ್ಲುಪೇಟೆ ಪುರಸಭೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನನ್ನ ಮರ, ನನ್ನ ನೆರಳು ಎಂಬ ವಿನೂತನ ಪರಿಸರ ಆಂದೋಲನ ಹಮ್ಮಿಕೊಳ್ಳಲಾಗಿತ್ತು. 83 ಮಂದಿ ತಮ್ಮ ಮನೆಗಳ ಮುಂದೆ ಗಿಡ ನೆಟ್ಟ ಫೋಟೋಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದರು. ಇವರಲ್ಲಿ ಐದು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪರಸರ ಸಂರಕ್ಷಣೆ ಚಟುವಟಿಕೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ದೊರೆತಿರುವುದು ಉತ್ತಮ ವಿಚಾರವಾಗಿದೆ. ಭವಿಷ್ಯದಲ್ಲಿ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುವ ಆಶಾಭಾವನೆ ಇದೆ ಎಂದು ತಿಳಿಸಿದರು. ಲಕ್ಕಿ ಡಿಪ್ ಮೂಲಕ ಆಯ್ಕೆಯಾದವರಿಗೆ ಜಿಲ್ಲಾಧಿಕಾರಿ ಸದ್ಯದಲ್ಲೇ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡುವ ಮೂಲಕ ಅಭಿನಂದಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪುರಸಭೆ ಇಂಜಿನಿಯರ್ ಮಂಜುನಾಥ್, ಅಧಿಕಾರಿ ಮೂರ್ತಿ, ಮತ್ತು ನೌಕರರಾದ ತ್ರಿವೇಣಿ, ಹೇಮಾ, ಗು.ಚಿ.ರಮೇಶ್, ಪುಟ್ಟಸ್ವಾಮಿ, ರವಿ, ಶಿವಕುಮಾರ್, ಪುನೀತ್, ರಾಚಪ್ಪಾಜಿ, ಕಿರಣ್, ಫಣೀಶ್ ಹಾಜರಿದ್ದರು.