ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಗ್ರಾಮದಲ್ಲಿ ಟೀಂ ಮೆಟ್ರೋ ಆಯೋಜಿದ್ದ ಕ್ರಿಕೆಟ್ ಪಂದ್ಯಾವಳಿಗೆ ರೋಜರ್ ಬಿನ್ನಿ ಚಾಲನೆ ನೀಡಿದರು. ಎಂ.ಸಿ.ನಾಗರಾಜು, ಚಿಕ್ಕಣ್ಣ, ಡಿ.ಆರ್.ನಾಗೇಶ್ ಇತರರು ಇದ್ದರು. 
ಚಾಮರಾಜನಗರ

ಗ್ರಾಮೀಣ ಕ್ರೀಡಾಪಟುಗಳಿಗೆ ತರಬೇತಿ ಅಗತ್ಯ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • rural athletes
ಗುಂಡ್ಲುಪೇಟೆ: ಗ್ರಾಮೀಣ ಕ್ರೀಡಾಪಟುಗಳು ನಗರ ಪ್ರದೇಶಗಳಿಗೆ ಹೋಗಿ ಉತ್ತಮ ತರಬೇತಿ ಪಡೆದಾಗ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದರು.
ತಾಲೂಕಿನ ಮೇಲುಕಾಮನಹಳ್ಳಿ ಗ್ರಾಮದಲ್ಲಿ ಬುಧವಾರ ಟೀಂ ಮೆಟ್ರೋ ವತಿಯಿಂದ ಆಯೋಜಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕ್ರಿಕೆಟ್ ಹೆಚ್ಚು ಜನಪ್ರಿಯ ಕ್ರೀಡೆಯಾಗಿದೆೆ. ಭಾರತದ ಉದ್ದಗಲಕ್ಕೂ ಎಲ್ಲೆಂದರಲ್ಲಿ ಕ್ರಿಕೆಟ್ ಆಡುವುದು ಕಂಡುಬರುತ್ತದೆ. ಗ್ರಾಮೀಣ ಭಾಗದ ಯುವಕರಲ್ಲಿ ಸಹ ಹೆಚ್ಚು ಪ್ರತಿಭೆ ಇದ್ದು, ಅವರಿಗೆ ಸೂಕ್ತ ತರಬೇತಿ ಮತ್ತು ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಮನಸ್ಸಿದ್ದರೆ ನಗರ ಪ್ರದೇಶಗಳಲ್ಲಿರುವ ಕ್ಲಬ್‌ಗಳಿಗೆ ಸೇರಿ ತರಬೇತಿ ಪಡೆದರೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಮಹೇಂದ್ರ ಸಿಂಗ್ ಧೋನಿ ಸಹ ಜಾರ್ಖಂಡ್‌ನ ಸಣ್ಣ ಹಳ್ಳಿಯ ಪ್ರತಿಭೆ. ಪ್ರತಿಭೆಯನ್ನು ಯಾರೂ ನಕಲು ಮಾಡಲು ಸಾಧ್ಯವಾಗುವುದಿಲ್ಲ. ಅದು ಪ್ರತಿಭಾವಂತರಲ್ಲಿ ಸ್ವಯಂ ಪ್ರೇರಿತರಾಗಿ ಬೆಳೆಯುತ್ತದೆ ಎಂದರು.
ಉದ್ಯಮಿ ಎಂ.ಸಿ.ನಾಗರಾಜು, ಗ್ರಾಮದ ಮುಖಂಡರಾದ ಚಿಕ್ಕಣ್ಣ, ಡಿ.ಆರ್.ನಾಗೇಶ್, ಶ್ರೀನಿವಾಸ, ಜಯರಾಜು, ರಾಜು ಹಾಗೂ ಇತರರು ಇದ್ದರು.