ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ರಸ್ತೆಗಿಳಿದ ಗಜರಾಜ ವಾಹನಗಳವರ ಎದೆಯಲ್ಲಿ ಭೀತಿಯುಟ್ಟಿಸಿದ್ದಾನೆ. 
ಚಾಮರಾಜನಗರ

ರಸ್ತೆಗಿಳಿದ ಆನೆ ಕಂಡು ಪ್ರವಾಸಿಗರಲ್ಲಿ ಆತಂಕ

ಪ್ರಮುಖ ಮುಖ್ಯಾಂಶಗಳು

  • ಕೆಲ ಕಾಲ ಸಂಚಾರಕ್ಕೆ ಅಡಚಣೆ
ಗುಂಡ್ಲುಪೇಟೆ: ಬಂಡೀಪುರ-ಊಟಿ ರಸ್ತೆಯಲ್ಲಿ ವಾಹನಗಳಿಗೆ ಎದುರುಗೊಂಡ ಗಜರಾಜ ಸ್ವಲ್ಪ ಹೊತ್ತು ವಾಹನಗಳ ಸಂಚಾರಕ್ಕೆ ಅಡಚಣೆ ಮಾಡಿದ್ದು, ವಾಹನ ಸವಾರರಲ್ಲಿ ಭಯ ಮೂಡಿಸಿದೆ.
ಬುಧವಾರ ಮಧ್ಯಾಹ್ನ ವಾಹನಗಳ ಸಂಚಾರ ಕಡಿಮೆಯಿದ್ದ ಸಂದರ್ಭದಲ್ಲಿ ರಸ್ತೆಗೆ ಬಂದ ಕಾಡಾನೆಯನ್ನು ಕಂಡ ಪ್ರವಾಸಿಗರು ಆತಂಕಕ್ಕೊಳಗಾದ್ದಾರೆ. ಕೂಡಲೇ ಪ್ರವಾಸಿಗರು ವಾಹನ ನಿಲ್ಲಿಸಿ ಆನೆ ದಾಟಿಹೋಗಲು ಅವಕಾಶ ಮಾಡಿಕೊಟ್ಟರೂ ಕಾಡಿನತ್ತ ಹೆಜ್ಜೆ ಹಾಕದೆ ಕಾರೊಂದರ ಬಳಿ ಹೋಗುದೆ. ಈ ವೇಳೆ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿಗಟ್ಟಿದರು.